Bhasaka
← Back to home

ನೀನೇನ ಮಾಡಲಾಪಿಯೋ

Author: ವಿಜಯದಾಸCategory: ಶ್ರೀಕೃಷ್ಣ
ನೀನೇನ ಮಾಡಲಾಪಿಯೋ ಲಕುಮೀಶಾ | ನಾನೀಗ ಪಡೆದದ್ದು ಉಣದಲೆ ಪೋಗುವದೆ | ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ ಏಕ ಭಕುತಿಲಿ ಸರ್ವೋತ್ತಮನೆಂದು ಏಕಾಂತ ಭಜಿಪ ಮನುಜಗಾದರು ಬರೆದ ವಾಕು ತಪ್ಪುವದೇನೋ ಅಜನು ನಿರ್ನೈಸಿದ||1|| ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು ಬಿಂದು ಮಾತ್ರ ತೊಲಗಿಪ ನಡತಿ ಕಾಣೆ ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ ||2|| ಇದ್ದದೊಂದು ಮರಿ ಅಡಗಾಣಿಸಿ ಬಂದು ಹದ್ದು ತಾ ವೈಯಲು ಆ ಕುರುಬ ಯೆಲ್ಲಿ ಇದ್ದರೇನು ಭಯ ವಿಜಯವಿಠ್ಠಲ ನಿನ್ನ ಪೊದ್ದಿದವಗಾದರು ಅನುಭವಿಸದೆ ಬಿಡದು||3||

Thoughts & Reflections

0

No reflections shared yet. Be the first to share your thoughts!

Share your thought