Bhasaka
← Back to home

ನೀನೋಲಿದುದ್ದಕ್ಕೀ ಇಹ

Author: ವಿಜಯದಾಸCategory: ಶ್ರೀಕೃಷ್ಣ
ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು ನಾನೊಲ್ಲೆ ನಾನೊಲ್ಲೆ ಸರ್ವೇಶಾ ನಿನ್ನನುರಾಗದಿ ಗತಿಯೆಂದು ನಂಬಿದ ಮಾನವನೊಡನೆ ನೀನಾಡುವದೆಲ್ಲಾ ಷಡುರಸ ನಾನಾ ಸುಭೋಜನವ ಬಿಡಿಸಯ್ಯ ದಾನವ ಭಂಜನ ಒಡಲಿಗೋಸುಗ ನಿನ್ನನು ಸೇವಿಸುವೆ ಒಡೆಯ ದಾಂಟಿಸೊ ಭವಕಡಲವೇಗ ಜ್ಞಾನ ತೋರಿಸದಿರೆ | ದಿವ್ಯಾಂಬರಗಳ ಉಡಿಸಿ ಸ್ವರ್ಣಾಭರಣಗಳ ತೊಡಿಸಿ | ಬರಿ ಮಾತಿನಲಿ ಮೊರೆ ಯಿಡುವೆನೊ ವಾಕ್ಕಾಯದಿಂದಲೀ ||1|| ಜನರು ಜನಪರಿಂದ ಮನ್ನಣೆ ಸ್ವಲ್ಪ | ಎನಗೆ ಹತ್ತದು ಕಾಣೊ ನಿನ್ನಾಣೆ || ಮನುಜನ ಸೈಸಿದವನ ಬಾಯೆನೆ ಬರೆವಾ | ಹನತೇರು ಮೊದಲಾದ | ಘನ ವಿಭವ ದೊರೆಯದೆ | ಜನುಮದಲಿ ಬಂದದಕೆ ಮಹಾ ಸಾಧನವಿಧಾರಿ ತೋರಿಸಿ | ನಿನ್ನ ದಾಸನೆನಿಸದೆ | ನಿಸ್ಸಾರವೆಣಿಸಿ ತೋರ್ಪ ದೇವ ಸೈಸೈ ||2|| ಕಂಡಕಂಡಲಿಯೆನ್ನ ತಿರಿಗಿಸಿ ಬಹು ಥಂಡ ಥಸ್ಂಡದಲೆನ್ನ ಮರುಗಿಸಿ | ಮಂಡಲದೊಳು ಪ್ರಚಂಡನೆನಿಸದಿರು | ಉಂಡ ಪರಾನ್ನಕೆ ದಂಡನೆ ಬಹಳಲ್ಲಿ | ತೊಂಡ ನಾನಯ್ಯ ಕರುಣಸಾಗರ | ಖಂಡ ಮತಿಯನು ಕೊಡದೆ ಮುಕ್ತರ | ಹಿಂಡಿನೊಳು ಕೂಡಿಸುವದೆಮ್ಮನು | ಅಂಡ ಜಾಂಸಗ ವಿಜಯವಿಠ್ಠಲಾ ||3||

Thoughts & Reflections

0

No reflections shared yet. Be the first to share your thoughts!

Share your thought