Bhasaka
← Back to home

ನುತಿಸಿ ಬೇಡುವೆ ವರವ

Author: ವಿಜಯದಾಸCategory: ಶ್ರೀಕೃಷ್ಣ
ನುತಿಸಿ ಬೇಡುವೆ ವರವ ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ ಬದರಮಂಗಳಗಾತ್ರ ಬಲು ಸುಲಭ ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ ||1|| ಅಂದವಾದ ಕಾವ್ಯ ಸಾಮಥ್ರ್ಯಧೀರುವೆ ಮಂದಹಾಸದಿ ನೋಳ್ಪ ಭಕುತ ಜನರ ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು ನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ ||2|| ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ ಸಾಧು ಸಜ್ಜನಗೇಯ ಸತ್ಯಬೋಧ ಮೋದಿ ಹಯವದನ ರಾಮ ವಿಜಯವಿಠ್ಠಲ ನಾದಿದೈವವೆಂದು ಎಣಿಸುವ ಜಪಶೀಲ ||3||

Thoughts & Reflections

0

No reflections shared yet. Be the first to share your thoughts!

Share your thought