Bhasaka
← Back to home

ನೆಚ್ಚದಿರು ಸಂಸಾರ ಕಡೆಗೆ

Author: ವಿಜಯದಾಸCategory: ವೈರಾಗ್ಯ
ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು ||1|| ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ ||2|| ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ ||3|| ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು ಕಬ್ಬು ಕಾರ್ಮುಕನಿಂದ ಬಿಡಿಸಿ ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ ||4|| ಯೌವನವೊದಗಿದಾಗ ಏನೆಂದರೂ ಅಪ್ಪ ಅವ್ವಣ್ಣನೆಂದು ನಸುನಗುತ ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ ಬವ್ವನ ತೆರೆದಲಾಡಿಪರೋ-ಪ್ರಾಣಿ ||5|| ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ ದುಷ್ಕರ್ಮಕೊಳಗಾಗದಿರೆಲೋ ನಿಷ್ಕಂಟಕವಾದ ಮಾರ್ಗದಲಿ ನರಹರಿಯ ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ ||6|| ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು ಹಂಬಲಿಸಿ ಬಿದ್ದಂತೆ ನೀನು ಉಂಬ ವಿಷಯಂಗಳಿಗೆ ಕವಿ ಜೋತು ಬಿದ್ದು ಈ ಡಿಂಬವನು ಪೋಷಿಸದಿರೆಲವೊ-ಪ್ರಾಣಿ ||7|| ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ ಸ್ನೇಹಭಾವವನ್ನು ಬಯಸಿ ಆಹಾರಗಳ ತಿಂದು ಕಾಯ ಪುಷ್ಟಿಯಿಂದ ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ||8|| ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ ಕಲ್ಪಾಯು ನಿನಗಿಲ್ಲವಲ್ಲೊ ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ- ತಲ್ಪನ್ನ ಮೊರೆಹೋಗಲೋ-ಪ್ರಾಣಿ||9|| ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ ಕ್ಲೇಶಕೊಳಗಾಗಿ ಹೊನ್ನುಗಳ ಏಸೇಸು ತಂದದ್ದು ಏನಾಯಿತೋ ಒಂದು- ಕಾಸು ನಾಳೆಗೆ ಕಾಣೆಯೋ-ಪ್ರಾಣಿ||10|| ಎಂದಿಗಾದರೋ ಇದೇ ಸಂಸಾರ ವಿಸ್ತಾರ ಒಂದಕ್ಕೆ ಒಂದೊಂದು ಅಧಿಕ ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ||11|| ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ ಕರ್ತೃ ನಾನೆಂದು ಕೂಗುವಿಯಲೊ ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ ||12|| ದೊಡ್ಡವನು ನಾನು ಎನಗೆಲ್ಲ ಜನರು ಬಂದು ಅಡ್ಡಬೀಳುವರೆಂಬ ಮಾತು ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ ||13|| ಕೋಟಿಯಾದರು ಕೇಳು ಅವರೋಕ್ಷಿಗಾದರೂ ಕೋಟಲೆಯೊಳಿರದೆ ಗತಿಯಿಲ್ಲ ತಾಟತೂಟಕ ಮಾಡಿ ಅವರಂತೆ ನುಡಿದು ಭವ ದಾಟಬೇಕೋ ಬೇಗ ಜಾಣ-ಪ್ರಾಣಿ||14|| ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ ಪಾದಿಸಿ ಧನ ಧಾನ್ಯ ತಂದು ಮೋದಪಡಿಸುವೆನೆಂದು ವಾದಿಸುವ ಮನುಜನ್ನ ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ ||15|| ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ ದಣುವಿಕ್ಯಲ್ಲದೆ ಪೂರ್ಣವಹುದೆ ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ- ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16 ಚಿತ್ರಗುಪ್ತರು ನಿತ್ಯ ಬರೆದ ಲೆಖ್ಖವು ದಿವಾ ರಾತ್ರಿ ನೋಡುತಲಿದ್ದು ನಿನ್ನ ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ- ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ ||17|| ಎನಗೆ ತನಗೆಂದು ಯಮಭಟರು ಕರಗಳ ಹೊಯಿದು ಕಣಿದು ಭುಜ ಚಪ್ಪರುಸುತಿಹರೊ ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ ವನಜ ಧಾನ್ಯವ ಒಲವು ಮಾಡೊ-ಪ್ರಾಣಿ ||18|| ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ ಮತಕೆ ವಿರೋಧವಾಗದಂತೆ ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ- ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ ||19|| ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ ವ್ಯರ್ಥಧಾವತಿ ಪ್ರಾಪ್ತಕರ್ಮ ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_ ಥಾರ್ಥಾ e್ಞÁನದಿಂದ ಬಾಳೊ ಪ್ರಾಣಿ||20|| ಶಿಥಿಲವಾಗಿ ಪೋಪ ದೇಹಕೆ ಮಮತಿಂದ ಮಿಥುನ ಭಾವಗಳನ್ನೆ ಬಯಸಿ ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ ||21|| ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ ವನರಾಶಿ ದ್ವೀಪ ಪಾತಾಳ ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ ||22|| ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ ಗಳಿಸಿಕೋ ಪೂರ್ಣಾಯು ವಾಯು ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ ಸುಳಿಯ ಜಾಗ್ರತನಾ ಗೆಲೋ ಪ್ರಾಣಿ ||23||

Thoughts & Reflections

0

No reflections shared yet. Be the first to share your thoughts!

Share your thought