Bhasaka
← Back to home

ನೆನೆದು ನಿಷ್ಕಳಂಕರಾಗಿರೋ

Author: ವಿಜಯದಾಸCategory: ಶ್ರೀಕೃಷ್ಣ
ನೆನೆದು ನಿಷ್ಕಳಂಕರಾಗಿರೋ ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ ಹೊಲಗೇರಿಯೊಳಗೆ ಸುಳಿದಾಡುವಾಗ ಹೊಲಿಯಾದವನು ತನ್ನ ಎದುರಿಗೆ ಬರುವಾಗ ಕಲಿಶಿಷ್ಯನಾದ ಮಣಿವಂತನ ನೆನೆಸಿರೊ||1|| ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ ಬದ್ಧವಾಗಿ ಗುಹ್ಯ ತೊಳೆಯುವಾಗ ಅಪ್ರ ಬದ್ಧನಾದ ಏಕಲವ್ಯನ ನೆನೆಯಿರೋ ||2|| ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ ವಮನವಾಗುವಾಗ ಮರಿಯದಲೆ ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ ||3||

Thoughts & Reflections

0

No reflections shared yet. Be the first to share your thoughts!

Share your thought