Bhasaka
← Back to home

ನೆನೆಸು ಮನವೆ ನಲಿವಿನಿಂದಲಿ

Author: ವಿಜಯದಾಸCategory: ಶ್ರೀಕೃಷ್ಣ
ನೆನೆಸು ಮನವೆ ನಲಿವಿನಿಂದಲಿ ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ಹರಿಯ ವನಜ ಚರಣವನ್ನು ಹೃ ದ್ವನಜದೊಳಗೆ ನಿಲಿಸಿ ನಗುತ ಪ್ರಳಯದಲ್ಲಿ ವರ ರಮಾ ಕ ಳವ ತಾಳಿ ಲೀಲೆಯಲ್ಲಿ ಪೊಳವ ಕಂಗಳಿಂದ ಕಿಡಿ ಗಳನು ತೋರಿ ಕುಣಿವುತ ಜಲಜ ಪೀಠ ಸುರಪ ಪುಲಿದೊ ಗಲ ವಸನ ಉಳಿದ ಸುರರ ಅಳಿದು ಏಕಮೇವನಾಗಿ ನಲಿವ ನಾರಸಿಂಹನೆಂದು ||1|| ಜರಾಮರಣರಹಿತ ಸುಜ ನರನ ಕಾಯ್ದು ಕರುಣದಲ್ಲಿ ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ ರ್ಜರರ ಪೊರೆದು ನಿಗಮತತಿಗೆ ಪರಮನೆಂದೆನಿಸಿ ಚರಿಸುತಿಪ್ಪ ಅರುಣಪ್ರಭೆಗೆ ಕೋಟಿ ಮಿಗಿಲು ಪರಮಪುರುಷ ಸಿರಿಧರನ್ನ ||2|| ಕೆಡದೆ ಪರಮ ಭಕುತಿ ಮಾರ್ಗ ವಿಡಿದು ಗರ್ವವೆಂಬ ಕವಚ ತೊಡದೆ ದುರುಳ ಚೇತನಕ್ಕೆ ಕೊಡದೆ ಮನಸು ವಿನಯದಿಂದ ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ ಬಿಡದೆ ನುಡಿಯೆ ಬಂದ ಅವ ಘಡವ ದಾಟಿಸು ವೊಲಿದು ಕಾಯುವಾ||3||

Thoughts & Reflections

0

No reflections shared yet. Be the first to share your thoughts!

Share your thought