Bhasaka
← Back to home

ನೊಂದು ಸಂಸಾರದೊಳಗೊಂದಿಸುವೆನೋ

Author: ವಿಜಯದಾಸCategory: ಶ್ರೀಕೃಷ್ಣ
ನೊಂದು ಸಂಸಾರದೊಳಗೊಂದಿಸುವೆನೋ ಇಂದು ಬಿಂದು ಮಾಧವ ಯಾದವ ಕರುಣಬಾರದೆ ನಿನಗೆ ಅಕಟಕಟ ಅಕಟಕಟ ಶರಣ ನಾ ನಿನಗಲ್ಲವೇ ಸ್ವಾಮಿ ನಿನ್ನ ಮೊರೆಹೊಕ್ಕೆ ಸರ್ವಾಂತರ್ಯಾಮಿ-ಎನ್ನ ಎರವು ಮಾಡುವರೇನೋ ಪ್ರೇಮಿ-ಇನ್ನು ಪರಿಹರಿಸು ಸಂಚಿತಾಗಾಮಿ-ಇದೇ ಸರಿಯೇನೊ ಜಗದೊಳಗೆ ಭಕುತವತ್ಸಲನೆಂಬ ಬಿರುದು ಪೊಳ್ಳಾಗದೇನೊ ನಿರುತ ಖ್ಯಾತ||1|| ಸತತ ಸುಖವುಳ್ಳರೆ ಬಾಯ್ದೆರೆದು ಪಲ್ಗಿರಿದು ನುತಿಸಿ ಬೇಡಿಕೊಂಬೆನೇ ನಿನ್ನ- ಮುಂದೆ ಗತಿಯ ಕಾಣದಲೆ ಚಾಲ್ವರಿದೆ ಭೇದ- ಮತಿ ಕೊಡದೆ ನೋಡುವುದು ಬರಿದೆ-ಸರ್ವ ಕ್ಷಿತಿಯೊಳಗೆ ನೀನೆಂದು ಅರಿದೆ-ವರ- ತತುವ ನಿಯ್ಯಾಮಕರ ಬಳಿ ಪಿಡಿದು ನಿನ್ನಂಘ್ರಿ ಶತಪತ್ರ ತೋರಿಸೈಯ್ಯಾ ಜೀಯಾ ||2|| ಶೃತಿಶಾಸ್ತ್ರ ಪೌರಾಣ ಭಾರತ ರಾಮಾಯಣ ಇತಿಹಾಸ ಪಾಂಚರಾತ್ರ ನಿಗಮ-ನಿನ್ನ ತುತಿಪ ಭಕುತರಿಗೆ ತಲೆಬಾಗಿ-ಕೊಂಡು ಪ್ರತಿದಿವಸದಲಿ ಚೆನ್ನಾಗಿ-ವಲಿದು ಅತಿಶಯವ ಕೊಡುತ ಲೇಸಾಗಿ-ವಿಘ್ನ ತತಿಕಳೆದು ನೀ ಬಂದು ಸಾರೆ ಬೆರಗಾಗುತಿದೆ ಪತಿತಿ ಪಾವನ ಮೋಹನ-ಚೆನ್ನ||3|| ತಡವ್ಯಾಕೆ ಗುಣಕಾಲ ಕರ್ಮದೇಶಗಳೆಲ್ಲ ವಡೆಯ ಎನ್ನಾಧೀನವೇ ಪೇಳೊ-ದು:ಖ ಬಿಡಿಸುವುದು ನಿನಗುಚಿತವಲ್ಲ-ಪಾಟು ಬಡಿಸದಿರು ಸಿರಿ ಲಕುಮಿನಲ್ಲ-ಒಂದು ನುಡಿವೆ ನಾನಾಂತರ್ಯ ಸೊಲ್ಲ-ಇಂತು ಕಡೆಮಾಡಿ ನೋಡದಿರು ದಿವಸ ಹಿಂದಾಗುತಿದೆ ಬಡವರಾಧಾರಿ ಕರುಣೀ-ದಾನಿ||4|| ಧ್ರುವನು ನಭದೊಳು ಇಲ್ಲಿ ರಾವಣಾನುಜ ಅಧೋ ಭುವನದಲಿ ಬಲಿರಾಯನ ನೋಡಿ, ನಾನು ತವಪಾದ ಗತಿಯೆಂದು ಬಂದೆ-ಮಹಾ ಭವಣೆ ಬಟ್ಟೆನೊ ಕೇಳು ಹಿಂದೆ-ಜಗದಿ ತ್ರಿವಿಧ ತಾಪಗಳಿಂದ ನೊಂದೆ-ಈ ಅವಸರಕೆ ಬಂದೊದಗಿ ನಿನ್ನ ನಾಮಾಮೃತದ ಸವಿದೋರೊ ದ್ವಾರಾವತಿಯ-ಜೀಯ ||5|| ಅಂಧಕೂಪದಲಿ ಬಿದ್ದವನ ನೋಡಿ ನಿನಗೆ ಚ ಕ್ಕಂದವಾಗಿದೆಯೊ ಕಾಣೆ-ನಾನು ಸಂದೇಹ ದ್ವೇಷದವನಲ್ಲ-ಇದು ಎಂದೆಂದಿಗೂ ಪುಸಿಯು ಅಲ್ಲ-ಹೃದಯ- ಮಂದಿರದೊಳು ಬಲ್ಲೆಯೆಲ್ಲ-ಸ್ವಾಮಿ ನೊಂದು ಕೂಗಿದರೆ ಎಳೆಗಂದಿಯೆಂಬಾ ಮಾತು ಇಂದು ಎತ್ತಲಿ ಪೋಯಿತೋ ತಾತ-ನೀತ ||6|| ಗುಣವಂತ ಬಲವಂತ ಜಯವಂತ ಸಿರಿವಂತ ಘನವಂತ ಧೈರ್ಯವಂತ ಶ್ರೀಕಾಂತ-ಎನ್ನ ಮನದ ದುಮ್ಮಾನವನೆ ಬಿಡಿಸೊ-ನಿನ್ನ ಅನವರತ ನಾಮವನು ನುಡಿಸೊ-ಮಧ್ವ ಮುನಿ ಕರುಣ ಕವಚವನು ತೊಡಿಸೊ-ಇದೇ ಜನುಮ ಜನುಮಕೆ ಬೇಡಿಕೊಂಬೆ-ಶರಣೆಂಬೆ ಪ್ರಣತ ಹೃದಯಾಬ್ಜ ತುಂಬೆ-ಕಾಂಬೆ ||7|| ಮಾನಸ್ನಾನವನುಂಡು ಮತಿಗೆಟ್ಟ ಪೂರ್ಣ ವಿ e್ಞÁನಮಯನೆ ನಿನ್ನ ಮರೆದೆ-ಕರ್ಮ ಪ್ರಾಣೇಂದ್ರಿಯಂಗಳು ನಿನ್ನ ವಶವೊ-ಇಂಥ ಜಾಣತನ ಬಹಳ ಸಂತಸವೊ-ಹೀಗೆ ಮಾಣದಲೆ ಇಪ್ಪ ಸಾಹಸವೋ ಚನ್ನ e್ಞÁನ ಭಕುತಿ ವಿರಕುತಿ ಕೊಟ್ಟು ನಿನ್ನವರೊಳಾನಂದದಲಿ ನಿಲ್ಲಿಸೈಯ್ಯ ಜೀಯ ||8|| ಶಂಖ ಚಕ್ರ ವರಾಭಯ ಹಸ್ತದಲಿ ನಿಂದ ವೆಂಕಟಾಚಲ ನಿವಾಸ ಶ್ರೀಶ-ನಿನ್ನ ಕಿಂಕರನ ಕಿಂಕರನೊ ನಾನು-ಅಕ- ಳಂಕ ಮನುಜನ ಮಾಡೊ ನೀನು-ಭವ ಸಂಕಟವ ಕಳೆಯಾ ಸುರಧೇನು-ಬೊಮ್ಮ ಶಂಕರ ವಿನುತ ವಿಜಯವಿಠ್ಠಲ ಹರಿ- ಣಾಂಕ ಸೌವರ್ಣ ಪೂರ್ಣ ಸಂಪೂರ್ಣ ||9||

Thoughts & Reflections

0

No reflections shared yet. Be the first to share your thoughts!

Share your thought