Bhasaka
← Back to home

ನೋಡಿ ನಾ ಧನ್ಯನಾದೆನೊ ತೋತಾದ್ರೀಶನ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿ ನಾ ಧನ್ಯನಾದೆನೊ ತೋತಾದ್ರೀಶನ ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ ಈಡಿಲ್ಲೆನಿಸುವನ ನೋಡಿ ಧನ್ಯನಾದೆನೊ ಆರೊ ಮಹಾರೂಪ ಬಂದು ಏಕಾಂತದಲ್ಲಿ ಆರಾಧಿಸಿದಾತನಂದು ಭಕುತಿ ಬಿಡದೆ ವಾರವಾರಕ್ಕೆ ಗತಿಯೆಂದು ಈ ರೀತಿಯಲ್ಲಿ ಇರೆ ತೋರಿದ ಕರುಣ ನಿನ್ನಾ ||1|| ಭಕುತನ್ನ ತಪಸಿಗೊಲಿದು ವೇಗದಿಂದಲಿ ಲಕುಮಿ ರಮಣ ಸುಳಿದು ಬೇಡಿದಂಥಾ ಧಿಕವಿತ್ತು ರೋಷವಳಿದು ಸುಖದ ಭಾರತ ಪೇಳೊ ದಕ್ಕೆ ಮುನಿ ಮಾಡಿದ ದಾನಾ ||2|| ಧರಿಗೆ ದಕ್ಷಿಣ ದಿಕ್ಕಿಲಿ ಮಾಹೇಂದ್ರಿ ಮಹಿ ಧರನ ಸಮೀಪದಲ್ಲಿ ಪ್ರತಿದಿನ ಮೆರೆವ ವೈಭೋಗದಿಂದಲಿ ಕರುಣಿ ವಿಜಯವಿಠ್ಠಲ ವರಧೇನು ಎನಿಸುವನಾ||3||

Thoughts & Reflections

0

No reflections shared yet. Be the first to share your thoughts!

Share your thought