Bhasaka
← Back to home

ನೋಡಿ ನೋಡಿನೊ ರಂಗಾ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ಬನ್ನ ಬಡುವೆನೊ ರಂಗ ನಿನ್ನ ಮೂರ್ತಿಯ ನಿತ್ಯ ||1|| ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು ||2|| ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ e್ಞÁನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ ||3|| ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ ||4|| ವಿಧವಾ ವ್ಯಾದಿಷ್ಟಾ ವ್ಯಭಿಚಾರಿ ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು ||5|| ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ ||6|| ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು ||7||

Thoughts & Reflections

0

No reflections shared yet. Be the first to share your thoughts!

Share your thought