Bhasaka
← Back to home

ನೋಡಿದೆ ಗಿರಿಯ ತಿರ್ಮಲನ ನಿತ್ಯ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿದೆ ಗಿರಿಯ ತಿರ್ಮಲನ ನಿತ್ಯ ಮೂಡಲ ದಿಕ್ಕಿನಲಿಪ್ಪ ನಿರ್ಮಲನಾ ನೀರೇರ ಕೂಡಾಡಿದವನಾ ದೇವ ನೀರೊಳಗೆ ಸದನವ ಬಿಗಿದವನಾ ನೀರದ ಶ್ಯಾಮ ವರ್ಣನನಾ ಭವ ನೀರಜ ಭವವಂದ್ಯಾ ದಯಾಸಾಗರನಾ ||1|| ನೀರು ಪಾದದಲಿ ಪೆತ್ತವನಾ ಮಹಾ ನೀರು ದಾಟಿ ಮಕ್ಕಳ ತೋರಿದವನಾ ನೀರಧಿ ಬಿಗಿದ ಪ್ರಬಲನಾ ಅಂದು ನೀರುಪತಿಯ ಭಂಗವ ಮಾಡಿದವನಾ ||2|| ನೀರು ಕಟದ ನಿಃಸಂಗನಾ ಸರ್ವ ನೀರು ಸೇದುವನಾಗಿ ಜಗವ ಸುತ್ತುವನ ನೀರೊಳಗಾಡುವ ನಿಜನಾ ಓರ್ವ ನೀರೇಳ ನಾರಿಯ ಮಾಡಿದ ಗುಣನಾ ||3|| ನೀರಜೋದರ ನಿರ್ಮೋಹನನಾ ಏಳು ನೀರಜ ದಳದಲ್ಲಿ ಪೊಳೆವ ಚನ್ನಿಗನಾ ನೀರು ಬಯಲು ಮಾಡಿದವನಾ ಅನ್ನ ನೀರೊಳಗಿದ್ದು ಜಗವ ಪೊತ್ತವನಾ ||4|| ನೀರಜಪಾಣಿ ವಲ್ಲಭನಾ ತೇಜ ನೀರನ್ನ ತತ್ವ ವ್ಯಾಪಿಸಿಕೊಂಡವನಾ ನೀರೆ ಗತಿಯ ಮಾಡಿದವನಾ ನಮ್ಮ ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ ||5||

Thoughts & Reflections

0

No reflections shared yet. Be the first to share your thoughts!

Share your thought