Bhasaka
← Back to home

ನೋಡಿದೆ ಗುರುಗಳ ನೋಡಿದೆ

Author: ವಿಜಯದಾಸCategory: ಶ್ರೀಗುರು ರಾಘವೇಂದ್ರ
ನೋಡಿದೆ ಗುರುಗಳ ನೋಡಿದೆ ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳ ಮೊದಲು ಗಾಂಗೇಯ ಶಯ್ಯಜನು ಈ ನದಿಯ ತೀರದಲ್ಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ ಲದನು ತಮ್ಮೊಳು ತಿಳಿದು ತವಕದಿ ಹೃದಯ ನಿರ್ಮಲರಾಗಿ ರಾಗದಿ ಬುಧಜನರ ಸಮ್ಮೆಳದಲಿ ಸಿರಿ ವದನನಂಘ್ರಿಯ ತಿಳಿದು ನೆನೆವರ ಉದಿತ ಭಾಸ್ಕರನಂತೆ ಪೊಳೆವರ ||1|| ಆಲವಬೋಧ ಮಿಕ್ಕಾದ ಮಹಮುನಿ ಗಳು ಸಅಂಶರು ಒಂದು ರೂಪದಿ ನೆಲೆಯಾಗಿ ನಿತ್ಯದಲಿ ಇಪ್ಪರು ಒಲಿಸಿಕೊಳುತಲಿ ಹರಿಯ ಗುಣಗಳ ತಿಳಿದು ತಿಳಿಸುತ ತಮ್ಮ ತಮಗಿಂ ರಧಿಕರಿಂದುಪದೇಶ ಮಾರ್ಗದಿ ಕಲಿಯುಗದೊಳು ಕೇವಲ ಕ ತ್ತಲೆಯ ಹರಿಸುವ ಸೊಬಗ ಸಂತತ ||2|| ರಾಮ ನರಹರಿ ಕೃಷ್ಣ ಕೃಷ್ಣರ ನೇಮದಿಂದೀ ಮೂರ್ತಿಗಳ ಪದ- ತಾಮರಸ ಭಜನೆಯನು ಮಾಳ್ಪರು ಕೋಮಲಾಂಗರು ಕಠಿನಪರವಾದಿ ಸ್ತೋಮಗಳ ಮಹಮಸ್ತಕಾದ್ರಿಗೆ ಭೂಮಿಯೊಳು ಪವಿಯೆನಿಸಿದ ಯತಿ ಯಾಮ ಯಾಮಕೆ ಎಲ್ಲರಿಗೆ ಶುಭ ಕಮಿತಾರ್ಥವ ಕರೆವ ಗುರುಗಳ ||3|| ನೂರು ಪರ್ವತ ವರುಷ ಬಿಡದಲೆ ಚಾರು ವೃಂದಾವನದಲಿ ವಿ ಸ್ತಾರ ಆರಾಧನೆಯು ತೊಲಗದೆ ವಾರವಾರಕೆ ಆಗುತ್ತಿಪ್ಪುದು ಸಾರೆ ಕಾರುಣ್ಯದಲಿ ಲಕುಮೀ ನಾರಾಯಣ ತಾ ಚಕ್ರರೂಪದಿ ಸಾರಿದವರಘವ ಕಳೆದು ಇವರಿಗೆ ಕೀರುತಿಯ ತಂದಿಪ್ಪುದನುದಿನ||4|| ಮಿತವು ಎನದಿರಿ ಇಲ್ಲಿ ದಿನ ದಿನ- ಕತಿಶಯದೆ ಆಗುವುದು ಭೂಸುರ ತತಿಗೆ ಭೋಜನ ಕಥಾಶ್ರವಣ ಭಾ- ರತ ಪುರಾಣಗಳಿಂದಲೊಪ್ಪುತ ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ ವ್ರತಿಯ ಇಲ್ಲವೆಂದೆನಿಸಿಕೊಂಬುದು ಪತಿತಪಾವನ ವಿಜಯವಿಠಲನ ತುತಿಸಿಕೊಳ್ಳುತ ಮೆರೆವ ಗುರುಗಳ ||5||

Thoughts & Reflections

0

No reflections shared yet. Be the first to share your thoughts!

Share your thought