Bhasaka
← Back to home

ನೋಡಿದೆ ನಾ ನೋಡಿದೆ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿದೆ ನಾ ನೋಡಿದೆ ಮೂಡಲಗಿರಿಯ ವಾಸನ ಯಾತ್ರಿಯ ಮಾಡಿದೆ ನಾ ಮಾಡಿದೆ ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸುರಿಕ್ಕದೆ ಏರಿದೆ ಕಟ್ಟ ಕಡಿಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ ||1|| ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕ್ಕೆ ಎರಗಿದೆ ಕ್ಲೇಶನ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೆ ||2|| ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ ನೋಡಿದೆ ಜಲದಲಿ ಮಿಂದು ವೇಗದಲಿ ತಿರುವೆಂ ಗಳ ದೇವನ ನೋಡ ಸಾಗಿದೆ ||3|| ಗುಡಿಯ ಪೊಕ್ಕೆನು ಗರುಡಗಂಬದ ಸಡಗರವನು ನಾ ನೋಡಿದೆ ಒಡನೆ ಪ್ರಾಣಾಚಾರದವರು ಪಡೆದ ವರಗಳ ಕೇಳಿದೆ ||4|| ಮುನ್ನ ಅವಸರ ಮನಿಯೊಳಗೆ ಅನ್ನಪೂರ್ಣಿಯ ನೋಡಿದೆ ಚನ್ನಾಗಿ ಮಂಟಪದೊಳು ಶ್ರೀನಿವಾ ಸನ್ನ ಮೂರುತಿಯ ನೋಡಿದೆ ||5|| ತೊಟ್ಟಲ ತೀರ್ಥವ ಕೊಂಡು ಪ್ರಸಾದ ಇಟ್ಟು ಮಾರುವದು ನೋಡಿದೆ ಇಷ್ಟ ಭಕ್ತರು ಸಮ್ಮುಖದಲಿ ಮುಟ್ಟಿ ಪಾಡುವದು ನೋಡಿದೆ||6|| ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ ಸ್ಕಾರವನು ಮಾಡಿದೆ ಭೋರನೆ ಕಟಾಂಜನದ ಫಲ್ಗುಣಿ ಬಂ ಗಾರ ಬಾಗಿಲವ ನೋಡಿದೆ ||7|| ಇಂದು ರವಿ ಶತಕೋಟಿ ತೇಜದ ಇಂದಿರೇಶನ ಪಾದಾರ ವಿಂದ ಯುಗ್ಮವ ಪುಳಕೋತ್ಸಹದಿಂದ ಸಂದರುಶನ ನಾ ಮಾಡಿದೆ ||8|| ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ ಕಟ್ಟಿದ್ದ ಧಟ್ಟಿ ವಢ್ಯಾಣ ಝಟಿ ಕಂಕಣಾಕಾರದಾಲಾಯುಧ ಇಟ್ಟ ಕಸ್ತೂರಿಯ ನೋಡಿದೆ ||9|| ಮಾಸದಾ ಪೂವು ಪೂಸಿದ ಗಂಧ ಭೂಷಣಾ ನಾನಾ ಪರಿವಿಧ ಏಸು ಬಗೆಯಲ್ಲಿಟ್ಟು ಶ್ರೀನಿ ವಾಸನ ಶೃಂಗಾರ ನೋಡಿದೆ ||10|| ಜಯಜಯ ಜಗದೀಶ ಜಗನ್ನಿವಾಸ ಜಯ ಜಯ ಲಕುಮಿ ಪರಿತೋಷ ಜಯ ಜಯ ವಿನಾಶ ಜಯ ಜಯ ಸರ್ವೇಶ ಜಯವೆಂದು ಸ್ತೋತ್ರವ ಮಾಡಿದೆ||11|| ಕೇಸಕ್ಕಿ ದಧ್ಯೋದನ ಪರಮಾನ್ನ ದೋಶಿ ಬಿಸಿಬಿಸಿ ಮನೋಹರ ಲೇಸಾಗಿ ಚತುರ್ವಿಧ ಪ್ರಸಾದವನ್ನು ಈಸು ಅವಸರ ನೋಡಿದೆ ||12|| ಕರ್ಪೂರದಾರತಿ ವಪ್ಪಿನಿಂದಲಿ ತಂದು ತಪ್ಪದಲಿ ಬೆಳಗೋದು ನೋಡಿದೆ ರೆಪ್ಪೆಯವಿ ಹಾಕದೆ ಮನದಣಿಯ ತಿ ಮ್ಮಪ್ಪನ ವಿಗ್ರಹ ನೋಡಿದೆ ||13|| ಹಿಮಋತು ಪ್ರಥಮ ಮಾಸ ದಶಮಿ ಹಿಮಕರ ವಾರದದಿನದಲ್ಲಿ ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ ವಿಮಲ ಚಾರಿತ್ರವ ನೋಡಿದೆ ||14|| ಶತ ಅಪರಾಧವ ಮಾಡಲು ಕಳೆದು ಗತಿಯನೀವ ಇಂದಿರಾ ಪತಿ ವಿಜಯವಿಠ್ಠಲ ಪುರಂದರನ ಸಂ ಗತಿಯಲ್ಲಿ ಸತತ ಸಾಕಿದಾ||15||

Thoughts & Reflections

0

No reflections shared yet. Be the first to share your thoughts!

Share your thought