Bhasaka
← Back to home

ನೋಡಿದೆನು ತಿರುವೆಂಗಳೇಶನಾ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿದೆನು ತಿರುವೆಂಗಳೇಶನಾ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ ನಾಡೊಳಗೆ ಈಡಿಲ್ಲದಪ್ಪನಾ ಘನಸುಂದರ ಜ್ಞಾನ ತೀರ್ಥ ಆನಂದ ಕನಕ ಮುಕ್ತ ವೈಕುಂಠ ಧನ ವರಹಾ ವೈರಾಗ್ಯನಿಲಿ ರ ತುನ ಚಂದ್ರಮ ವರಧರ್ಮ ನಾರಾ ಯಣ ಭಕುತಿ ಶ್ರೀಕಾಂತಿ ಬ್ರಹ್ಮಾ ರುಣ ವೃಷಭ ಶ್ರುತಿ ಗರುಡ ಸರ್ಪ ಜನತ ಪೂಜಿಪ ಸುರ ಸುಧಾನಂತ ಇನಿತು ಪೆಸರುಳ್ಳ ಪುಷ್ಕರಾದ್ರಿಯಾ||1|| ಖಗನ ಪೆಗಲಲಿ ನಗವ ತಂದ ಜಗದೊಳು ಸುವರ್ಣಮುಖರಿ ನಿ ಮ್ನಗ ತೀರದಲಿ ಸ್ಥಾಪಿಸಿದ ಸುತ್ತಲು ಝಗಝಗಿಸುದೆ ನೋಳ್ಪ ಜನರಿಗೆ ಅಗಣಿತ ಅಗಾಧಗಳು ತೆಗೆದು ಹಿಮ್ಮೊಗವಾಗಿ ಪೋದವು ಯುಗ ಯುಗ ಕಥಾಭೇದ ಬಗೆಬಗೆ ಪೊಗಳಿದರೆ ನೆಲೆಗಾಣೆ ಅನುದಿನಾ ||2|| ಸರಸ್ವತಿಗೆ ಮುನಿಯಿಂದ ಶಾಪವು ಬರಲು ಭರದಲಿ ಬಂದು ವಿರಜಾ ಸರತಿಯೊಳು ಬೆರಸಿದಳ್ ತಪದಲಿ ಹರಿಯ ಕರುಣವ ಪಡೆದು ಪ್ರತಿದಿನ ಸ್ಮರಸಿದವರಿಗೆ ಪುಣ್ಯವೀವುತ ಸರುವ ಸರೋವರಧಿಕವೆನಿಪ ಸುಂ ದರ ಸ್ವಾಮಿ ಪುಷ್ಕರಣಿಯನು ತ್ರಿ ಕರಣ ಬಲು ಒಂದಾಗಿಬಿಡದಲೆ ||3|| ಎರಡೈದು ಪ್ರಾಕಾರ ಗೋಪುರಾ ಎರಡೈದು ದ್ವಾರಗಳು ಕಟ್ಟಿದಾ ಮಿರುಗುವತಿ ಮಹಾ ಮಕರ ತೋರಣ ಧರೆಗೆ ಮಟ್ಟಿದ ಎಡಬಲದ ಪೂ ಸರಗಳೊಪ್ಪಲು ದ್ವಾರಪಾಲಕರಿ ರುತಿಪ್ಪರಲ್ಲೆಲ್ಲಿ ಕಾವುತಾ ತರುಚರಾದಿಯ ನಿಕರ ತುಂಬಿರೆ ಪರಿಪರಿಯ ಮಂಟಪಗಳಿಂದಾ ||4|| ಭಂಗರಹಿತ ಬಂಗಾರಮಯವಾದಾ ತುಂಗ ಆನಂದ ನಿಲಯ ವಿಮಾನಾ ಕಂಗಗಳಿಗೆ ಬಲು ತೇಜಿಃಪುಂಜದಿ ಹಿಂಗದಲೆ ಗೋಚರಿಸುತದೆ ನರ ಸಿಂಗ ಮೂತ್ರ್ಯಾದಿಗಳು ಪ್ರಾಣ ಭು ಜಂಗಧರಾದಿ ದಿಕ್ಪಾಲರೆಲ್ಲರು ಸಂಗ ಮತಿಯಲಿ ವಾಸವಾಗಿರೆ ಮಂಗಳಾಂಗ ಪ್ರಿಯಾಂಗ ಪ್ರಿಯನಾ ||5|| ಮುಕ್ತಿ ಬೀದಿಗಳೆರಡು ವಿ ರಕ್ತಿ e್ಞÁನ ಸತ್ಕರ್ಮ ಬಲು ದೃಢ ಭಕ್ತಿಯೋಗವು ಯಾವ ತ್ಯಾಗ ಸಂ ವ್ಯಕ್ತ ರಾಗವು ಈಪರಿ ಸು ಉಕ್ತಿ ದ್ವಾದಶ ಸಾಲ ಬೀದಿಗ ಳುಕ್ತ ಜನ ಸಂಚರಿಸುತ್ತಿಪ್ಪರು ಶಕ್ತನೊಬ್ಬನೆ ಜಗದೊಳೀತನೆ ವ್ಯಕ್ತ ಅವ್ಯಕ್ತದಲಿ ಚಿತ್ರವಾ ||6|| ಲೋಕೇಶ ಲೋಕಪಾಲಕರು ಖಗ ಕಾಕೋದರ ಗಂಧರ್ವ ಸನಕಾದಿ ಲೋಕ ಚಕ್ಷು ಸೀತಾಂಶು ಉದಿಸಿದರು ಏಕಾಂತನು ವಾಯುನಂದನ ಪಾಕಶಾಸನ ಸೌಮ್ಯ ಗುರು ಕವಿ ನಾಕಜನ ಮಿಗಿಲಾದ ಭಕ್ತರು ಏಕಗುಣವಾರಂಭಿಸಿ ಅ ನೇಕ ಗುಣದಲಿ ಭಜಿಸುತಿಪ್ಪುದಾ||7|| ಮೂರು ಪ್ರಸಾದ ಮಹಿಮೆಯ ಸಾರಿದರೆ ನೆಲೆದೋರದು ಕಂ ಸಾರಿ ಚಿನ್ಮಯ ಲೀಲೆಗೆ ಮತ್ತಾರಾದರು ಗಣ್ಯಮಾಳ್ಪರೆ ಧಾರುಣಿಲಿ ಮಧ್ಯದಲಿದಕೆ ಎ ದಿರುಗಾಣೆನು ಎಲ್ಲಿ ಚರಿಸಲು ಮಾರುತನು ತಾನೊಬ್ಬ ಬಲ್ಲ ವಿ ಸ್ತಾರವಿದರ ವಿಚಾರ ಮತಿಯಲಿ||8|| ಧೀರ ಜಗದೋದ್ಧಾರ ರಿಪು ಸಂ ಹಾರ ನಾನಾವತಾರ ನವನೀತ ಚೋರ ಜಾರ ಶಿರೋಮಣಿ ಶ್ರೀ ನಾರಿಯರರಸನೆ ತಾ ಭಕ್ತ ಚ ಕೋರ ಚಂದ್ರಮ ಪೂರ್ಣ ಸುಂದರ ಸಾರ ಭವಾರ್ಣವತಾರ ಕಾರಣ ವೀರ ವಿತರಣ ಶೂರನೆನಿಪನ್ನ ದ್ವಾರದಲಿ ಬಂದು ಸ್ತುತಿಸಿದೆನು ನಿಂದೂ ||9|| ಈ ವೈಲಕ್ಷಣವುಳ್ಳ ದೊರೆತನ ಈ ವೈಭವ ಸರ್ವೋತ್ತಮನೆಂಬದು ಈ ವೈಭೋಗ ಸಾಕಲ್ಯವಾಗಿದೆ ಈ ವೈಯಾರವು ಈತಗಲ್ಲದೆ ಈ ವೈಕುಂಠನ ನೋಡುವುದು ಮಹಾ ಈ ವೈದಿಕದ ಭಾಗ್ಯಕ್ಕೆಣೆಯೆ ಈ ವೈಧಾತ್ರಿಗೆಯಿವನು ಪೇಳಿದ ಈ ವೈಚಿತ್ರವ ಕೇಳಿ ಮನದಲಿ ||10|| ರನ್ನಮಯ ಕಿರೀಟ ಕುಂಡಲ ಕರ್ಣ ಕಸ್ತೂರಿನಾಮ ಪಣೆಯಲಿ ಕೆನ್ನೆ ಚಂಪಕ ನಾಸದಂತ ಪ್ರ ಸನ್ನ ವದನಾಂಭೋಜಲೋಚನಾ ಚಿನ್ನಸರ ಉಡುದಾರ ಸರಿಗೆ ಮೋ ಹನ್ನ ಪೀತಾಂಬರ ನೂಪುರಗೆಜ್ಜೆ ಸನ್ನಿಧಿಗೆ ನಡೆತಂದು ದೇವವರೇ ಣ್ಯನಂಘ್ರಿಯ ನೆನೆದೆ ಚೆನ್ನಾಗಿ ||11|| ಮೆರೆವ ಉತ್ಸವ ವಾಹನಂಗಳು ನೆರೆದ ಪ್ರಜೆದಟ್ಟಡಿಯಾಗಿದೆ ನೋಡಿ ಎರಡೊಂದು ವಿಧದವರುಯಿಲ್ಲಿಗೆ ಬರುವರೈ ಅವರವರ ತಕ್ಕದು ಹರಿಯ ಫಲವನು ಕೊಡುವನಿಲ್ಲದೆ ಅರಮರೆ ಇಲ್ಲಿದಕೆ ಎಂದಿಗು ಮೊರೆವ ನಾನಾ ವಾದ್ಯ ರಭಸ ವಿ ಸ್ತರಿಸ ಬಲ್ಲೆನೆ ನೂತನೂತನಾ ||12|| ರಥದ ಸಂಭ್ರಮವಾರು ಬಲ್ಲರು ಪ್ರತಿಗಾಣೆ ಈ ಪೃಥ್ವಿಯೊಳಗೆ ಅ ಪ್ರತಿ ಸಾಹಸಮಲ್ಲ ತನ್ನಯ ಸತಿಯೊಡನೆ ಪರುಠವಿಸಿ ಪೊಳೆವುತ್ತ ಚತುರ ಬೀದಿಯ ಸುತ್ತಿ ಸುಮನಸ ತತಿಯ ಸಂಗಡ ಬರುವ ಭರ ಉ ನ್ನತವ ಗುಣಿಸುತ್ತ ನಲಿನಲಿದು ಅ ಚ್ಯುತನ ಕ್ರೀಡೆಯ ಸ್ಮರಿಸಿ ನಮೋ ಎಂಬೆ||13|| ರಾಜರಾಜೇಶ್ವರ ನಿರಂತರ ರಾಜಿಸುತಿಪ್ಪ ಬಗೆಬಗೆ ಸಂಪೂಜೆಯಲಿ ರಾಜೋಪಚಾರದಿ ಮೂಜಗದೊಳು ಈ ನಿಧಿಯಲಿದ್ದ ಸೋಜಿಗವೆ ಮತ್ತೆಲ್ಲಿಯಿಲ್ಲವು ರಾಜಶೇಖರ ಬಲ್ಲವನೊಬ್ಬನೆ ಮಾಜದಲೆ ಸಜ್ಜನರು ಸತ್ಕರ್ಮ ಬೀಜಮಂದಿ ಮಾಡಿಬಿಡಲೆ ||14|| ದರ ಸುದರಶನ ಪಾಣಿ ತನ್ನ ಸಂ ದರುಶನವೆಮಗಿತ್ತು ಘನ ಆ ದರ ಪಾಲಿಸಿ ಸಂಚಿತಗಾಮಿ ಪಠಿಸಿ ಪ್ರಾರಬ್ಧವೇ ತೀರಿಸಿ ಕರುಣದಿಂದಲಿ ದಿವ್ಯರೂಪದ ಗುರುತು ತೋರುವ ಅಂತರಂಗದಿ ಪರಮಪಾವನ ವಿಜಯವಿಠ್ಠಲ ಪೊರೆವ ಪ್ರೀತಿಲಿ ಬಂದು ಮರಿಯದೆ||15||

Thoughts & Reflections

0

No reflections shared yet. Be the first to share your thoughts!

Share your thought