Bhasaka
← Back to home

ನೋಡಿದೆನು ಯಾದವ ಕೃಷ್ಣನ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿದೆನು ಯಾದವ ಕೃಷ್ಣನ | ಪಾಡಿದೆನೊ ಮನದಣಿಯ ವರಗಳ | ಬೇಡಿದಾಕ್ಷಣ ಕೊಡುವ ಜಗತ್ರಯ | ವಾಡಿಸುವ ವಾಗೀಶ ಜನಕನ ವೇದ ಭೂಧರ ಮೇದಿನಿ ಪ್ರ | ಹ್ಲಾದ ಸುರಪನ ಕಾದ ವಂಶವ | ಛೇದ ಸಾಗರ | ಹಾದಿ ಬಿಗಿದ ಗೋಯಿದ ಬತ್ತಲೆ | ಯಾದ ತುರಗವ | ಬೀದಿ ವದಿಸಿದನೀತ ಹಯಮೊಗ | ಬಾದರಾಯಣ ದತ್ತ ವೈಕುಂಠ | ಬೋಧ ಮೂರುತಿ ಕಪಿಲ ನಾನಾ ವಿ | ನೋದ ರೂಪದ ಆದಿ ದೈವವ ||1|| ಜನನಿಗಾಟವ ತೋರಿ ಕಡಗೋ | ಲನು ನೇಣರು ಕರದಲಿ ಪಿಡಿದು | ರು ಕ್ಮಿಣಿಯ ಕೈಯಿಂದ ಪೂಜೆಗೊಂಡರ್ಜು | ನನಿಂದಲಿ ಗೋಪಿ ಚಂ | ದನದೊಳಡಗಿ ಅಲ್ಲಿಂದ ಆನಂದ | ಮುನಿಗೊಲಿದು ಬಲು ವೇಗ ಪಡುವಣ | ವನಧಿ ತೀರದಲಿಪ್ಪನಂತಾಸನ ಬಳಿಯ ನಿಂದಿದ್ದ ಚಲುವ ||2|| ಸುತ್ತ ಯೋಜನ ಕ್ಷೇತ್ರವಿದರೊಳು | ಉತ್ತಮ ವಿಮಾನ ವೇದ ಪ | ರ್ವತಗಳು ಅಲ್ಲೆಲ್ಲಿ ಸರೋವರ | ಕತ್ತಲಿಗಭಿಮಾನಿನಿ ದುರ್ಗಾ | ಚಿತ್ತಕೊಪ್ಪುವ ಸ್ವರ್ಣ ನದಿಯ ಮಾರುತ ಸೋಕಲು ದುರಿತ ಪರಿಹರ | ಸೋತ್ತಮರಿಗಿದು ಸಿದ್ಧ ಸರ್ವದ | ತತ್ತಳಿಪ ಪರತತ್ವ ಹರಿಯ||3|| ತಂತ್ರ ಸಾರೋಕ್ತದಲಿ ಪೂಜೆ ನಿ | ರಂತರದಿ ಕೈಗೊಂಬ ಬಲು ಗುಣ | ವಂತ ನೀತನ ಹೊಳವು ಪೊಗಳಿದ | ರಂತ ಗಾಣವು ಶ್ರುತಿ ಪುರಾಣಗ | ಳೆಂತು ಪೇಳಲಿ ಮೆರೆವ ವೈಭವ | ಸಂತರಿಗೆ ಅತಿ ಪ್ರಿಯನಾಗಿಪ್ಪ | ನಂತ ಕಾಲಕೆ ದೋಷ ದೂರ ನಿಶ್ಚಿಂತ ನಿತ್ಯ ಸ್ವಾತಂತ್ರ ಪುರುಷನ ||4|| ಮಕರ ತಿಂಗಳು ಮೊದಲು ಪಕ್ಷದ | ಲಕುಮಿರಮಣನ ದಿವಸದಲ್ಲೀಗ | ಭಕುತಿಯಿಂದಲಿ ಬಂದು ವಂದಿಸಿ | ಅಕುಟಿಲರ ವೊಡಗೊಡಿ | ನಿಂದು ಗೋ | ಳಕವ ಚಿಂತಿಸಿ ಸ್ನಾನ ಒಂದೆ | ಸುಖ ತೀರ್ಥ ಸರೋವರದಲಿ ಮಾಡೆ | ಸಕಲ ಮನೋಭೀಷ್ಟ ತಾನು ಪಾಲಿಸಿ | ಮುಕುತರೊಳು ಪೊಂದಿಸುವ ದಾತನ ||5|| ಶುಕ್ರವಾರದ ಪೂಜೆ ನೋಡಲು | ವಕ್ರಗತಿಗಳು ಮುಟ್ಟಲಂಜೊವು | ಚಕ್ರವರ್ತಿ ತಾನಾಗಿ | ಸಕಲ ಪರಾಕ್ರಮದಲಿ ಚರಿಸಿ ಜಗದೊಳು | ಶುಕ್ರ ದೇವಸ್ಥಾನದೊಳು ಕಾ | ಲಕ್ರಮಣ ಮಾಡೆ | ಗೋತ್ರದೊಡನೆ ಪೂ ರ್ಣ ಕ್ರೀಡೆಯಾಡಿಸುತ ಸಲಹುವ | ಚಕ್ರಧರ ಅಕ್ರೂರ ವರದನ ||6|| ಕಣಿಸಿ ಉಡಿಸುವ ಕುಣಿಸಿ ನೋಡುವ | ಕನಸಿನೊಳಗಾವಾಗ ತನ್ನನು | ಮನಸಿನಲಿ ಕ್ಷಣ ಬಿಡದೆ ಗುಣಗಳ | ಎಣಿಸಿ ಮೈ ಮರೆದಡಿಗಡಿಗೆ ಈ | ತನುವೆ ನಿನ್ನಾಧೀನವೆಂದಾ | ಜನರಿಗಪವಾದ ಬರಲೀಸನು | ಫಣಿಫಣಾದಲಿ ನಾಟ್ಯಮಾಡಿದ | ದನುಜದಲ್ಲಣ ವಿಜಯವಿಠ್ಠಲನ್ನ ||7||

Thoughts & Reflections

0

No reflections shared yet. Be the first to share your thoughts!

Share your thought