Bhasaka
← Back to home

ನೋಡು ನೋಡು ಗರುಡಗಮನನ

Author: ವಿಜಯದಾಸCategory: ಶ್ರೀಕೃಷ್ಣ
ನೋಡು ನೋಡು ಗರುಡಗಮನನ ಮಾಡು ದಯವನು ವೇಗದಿ ಪಾಡುವೆ ಆನಂದದಲಿ ನಿನ್ನನು ಕೊಂಡಾಡುವೆನು ನಿನ್ನ ಮೂರ್ತಿಯಾ ಮಂಗಳಾಂಗನೆ ಮನ್ಮಥನ ಪಿತ ಸಂಗೀತ ಸುರಲೋಲನೆ ಕಂಗಳಬ್ಬರ ತೀರುವಂತೆ ಚರಣಂಗಳನೆ ತೋರೋ ವಿನಯದಿ||1|| ಪರಮ ಪುರುಷನೆ ಪುಣ್ಯ ಶ್ಲೋಕನೆ ದುರುಳ ದೈತ್ಯರ ದಲ್ಲಣ ಮರಿಯಲೀಸದೆ ನಿನ್ನ ಚರಣ ಸ್ಮರಣೆ ಒದಗಿಸೊ ವದನಕೆ ||2|| ವಂದನೆಯು ಗೋವಿಂದ ಗೋಪಾಲಾ ಮಂದರಧರ ಮಾಧವಾ ಇಂದು ವಿಜಯವಿಠ್ಠಲ ನಿನ್ನ ಸಂದರ್ಶನವ ಕೋರುತಾ ||3||

Thoughts & Reflections

0

No reflections shared yet. Be the first to share your thoughts!

Share your thought