Bhasaka
← Back to home

ಪತಿತನ್ನ ಪಾವನ ಮಾಡುವ

Author: ವಿಜಯದಾಸCategory: ಶ್ರೀಕೃಷ್ಣ
ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ ||1|| ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ ||2|| ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ ||3|| ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಮುನ್ನ ಮಾಡಿದ ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ ||4|| ಸಾಕು ಈ ದುಷ್ಕøತ ಬೇಕು ನಿನ್ನಯ ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು ||5||

Thoughts & Reflections

0

No reflections shared yet. Be the first to share your thoughts!

Share your thought