Bhasaka
← Back to home

ಪರಮ ಮಂಗಳ ಮೂರುತಿ

Author: ವಿಜಯದಾಸCategory: ಶ್ರೀಕೃಷ್ಣ
ಪರಮ ಮಂಗಳ ಮೂರುತಿ ದಿವ್ಯಕೀರುತಿ | ಧರೆಯೊಳಗಿದೆ ವಾರುಕಿ ಕರುಣಾಪಯೋನಿಧಿಯೆ ಕರವ ಪಿಡಿದು ಎನ್ನ | ಕರಣಶುದ್ಧನ ಮಾಡೊ ಕರವ ಮಸ್ತಕ ಬಾಗಿಪೆ ||1|| ರಾಘವೇಂದ್ರರ ಪಾದ ಲಾಘವ ಮರೆಯಲ್ಲಿ ಶ್ಲಾಘನ ಮಾಡಿದ ಮಾಘಧರನ ಪ್ರಿಯ ||2|| ನಿರುತ ಮಂತ್ರಾಲಯ ಪುರವಾಸಾ ಅಘನಾಶಾ| ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ ||3||

Thoughts & Reflections

0

No reflections shared yet. Be the first to share your thoughts!

Share your thought