Bhasaka
← Back to home

ಪರಮಯೋಗಿಯ ನೋಡಿರೊ ನೀವೆಲ್ಲರು

Author: ವಿಜಯದಾಸCategory: ಶ್ರೀಹನುಮಂತ
ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ ||1|| ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ||2|| ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ಪತಿ ವಿಜಯವಿಠ್ಠಲ ಬದರಿನಿಲಯ ನಿತ್ಯ ಪರಮ ||3||

Thoughts & Reflections

0

No reflections shared yet. Be the first to share your thoughts!

Share your thought