Bhasaka
← Back to home

ಪರಮಾತ್ಮನೆ ನೀ ಸರಿ ಎಂದು

Author: ವಿಜಯದಾಸCategory: ಶ್ರೀಕೃಷ್ಣ
ಪರಮಾತ್ಮನೆ ನೀ ಸರಿ ಎಂದು ಕರಗದ ತಮದಲ್ಲಿ ಸೇರುವದೆ ಜೀವ ಪರಮಾತ್ಮಗೆ ಭೇದವ ಆವಾವ ಕಾಲಕ್ಕೆಯಿಲ್ಲವೆಂದು ದೇವನ ಬಳಿಗೆ ನೀ ದೂರಾಗಿ ಈ ವಸುಧೆಯೊಳು ಬದುಕುವರೆ ||1|| ಭೇದ ಜೀವಕೆ ಜೀವ ಎಂದಿ ಗಾದರು ಇಲ್ಲವೆಂದು ನುಡಿದು ಈ ದುರಾಚಾರದಲ್ಲಿ ನಡೆದು ಮಾದಿಗನಂತೀಗ ಮಾರ್ಮಲಿದು||2|| ಜಡ ಪರಮಾತ್ಮ ಜಡ ಜಡಕೆ ಜಡ ಜೀವಕೆ ಅಭೇದವೆಂದು ಕಡುಗರ್ವದಿಂದಲಿ ಉಚ್ಚರಿಸಿ ಮಡಿದು ನರಕಕ್ಕೆ ಉರುಳುವರೆ ||3|| ಅರಸಿನ ಬಳಿಗೆ ತೋಟಿಗ ಬಂದು ಅರಸೆ ನೀನೆ ನಾನೆಂದಡೆ ಉರವಣಿಸಿ ಕೊಲ್ಲಿಸಿ ಅವನ ಶೆರಿಯ ಹಾಕದೆ ಮನ್ನಿಸುವನೆ ||4|| ದಾಸನ ದಾಸನು ಎಂದು ಏಸು ಜನ್ಮಕೆ ಅಹುದೆಂದು ದ್ವೇಷವು ತೊರೆದು ನೆನಿಸಿದರೆ ಮೀಸಲಾಗಿಡುವ ವಿಜಯವಿಠ್ಠಲಾ ||5||

Thoughts & Reflections

0

No reflections shared yet. Be the first to share your thoughts!

Share your thought