Bhasaka
← Back to home

ಪವಮಾನ ಜಗದ ಪ್ರಾಣ ಸಂಕರುಷಣ

Author: ವಿಜಯದಾಸCategory: ಶ್ರೀಹನುಮಂತ
ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರೀಯ |ಅ.ಪ| ಹೇಮ ಕಚ್ಚುಟ ಉಪವೀತ-ಧರಿಪ ಮಾರುತ ಕಾಮಾದಿ ವರ್ಗರಹಿತ ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನರಾಧಿಪುದಕೆ ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು ||1|| ವಜ್ರ ಶರೀರ ಗಂಭೀರ-ಮಕುಟಧರ ದುರ್ಜನವನ ಕುಠಾರ ನಿರ್ಜರಮಣಿ ದಯಾ ಪಾರಾ-ವಾರ ಉದಾರ ಸಜ್ಜನರಘ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆಮಾಡಿದೆ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ- ಮೂರ್ಜನದಲಿ ಭವವರ್ಜಿತನೆನಿಸೊ ||2|| ಪ್ರಾಣ ಅಪಾನ ಉದಾನ-ವ್ಯಾನ ಸಮಾನ ಆನಂದ ಭಾರತೀರಮಣ ನೀನೆ ಯಾಮ ಯಾಮಕೆ ಜ್ಞಾನ ಧನಪಾಲಿಪ ವರೇಣ್ಯ ನಾನು ನಿರುತದಲಿ ಏನೇನನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ ಕೊಡುವುದು ಭಾನು ಪ್ರಕಾಶ ||3||

Thoughts & Reflections

0

No reflections shared yet. Be the first to share your thoughts!

Share your thought