Bhasaka
← Back to home

ಪವಮಾನಾ ಮದ್ಗುರವೆ ಪವಮಾನಾ

Author: ವಿಜಯದಾಸCategory: ಶ್ರೀಹನುಮಂತ
ಪವಮಾನಾ ಮದ್ಗುರವೆ ಪವಮಾನಾ ಪವಮಾನಾ ಗುರುವೆ ಪರಾಕು | ನಾನು | ವಿವರಿಸುವೆನು ಕೇಳು ವಾಕು || ಆಹಾ | ತವಕದಿಂದಲಿ ಸಂಭವಿಸುವ ಮತಿಯಿತ್ತು | ಭವದಿಂದ ಕಡೆಗಿತ್ತು ಆಶ್ರಿತಜನ ಕಲ್ಪವೃಕ್ಷಾ | ನಿನ್ನ | ಆಶೆಮಾಡಿದೆ ಬಲು ದೀಕ್ಷಾ | ಗುಣರಾಶಿವಿರಾಗ ಪ್ರತ್ಯಕ್ಷ | ವಾಗಿ | ದಾಸತ್ವ ಕೊಡು ಬಲುದೀಕ್ಷಾ || ಆಹಾ || ಏಸು ಜನ್ಮಗಳಿಂದ | ದೋಷವ ಕಳೆದು ಸಂ | ತೋಷವಾಗುವ ಕರ್ಣ | ಭೂಷಣ ಕೃಪೆ ಮಾಡೊ ||1|| ಜ್ಞಾನ ಪ್ರಾಣೋತ್ತಮ ರೂಪ | ನಿನ್ನ | ನಾನು ನಂಬಿದೆನೊ ಪ್ರತಾಪ | ಸುರ | ಧೇನು ಭಕ್ತರಿಗೆ ಸಮೀಪ | ಜಗ | ತ್ರಾಣ ಕಪಿಕುಲ ದೀಪ || ಆಹಾ || ಆನಾದಿಯಲಿ ಬಂದು | ಜ್ಞಾನವ ನೋಡಿಸಿ | ಮಾನಸದಲಿ ಭೇದ | ವನ್ನು ಕರುಣಿಸು ನಿತ್ಯಾ ||2|| ಹರಿದಾಸರೊಳು ಅಗ್ರಣಿಯೆ | ನೋಡು | ಸುರರೊಳು ನಿನಗಾರು ಯೆಣೆಯಾ | ಚಿಂತಿ | ಪರಿಗೆ ಆವಾವಾ ಹೊಣೆಯೇ | ಆಹಾ | ಕರವ ಮುಗಿವೆ ಸಂ | ತೈಸು ಸ್ವಧರ್ಮವ | ಮೊರೆ ಹೊಕ್ಕವರ ವಿ | ಸ್ತರವಾಗಿ ಪ್ರತಿದಿನ ||3|| ತತ್ವೇಶ ಜನರೆಲ್ಲ ನೆರೆದು | ಅಹಂ | ಮತಿಯಲ್ಲಿ ಸತ್ಕರ್ಮ ಮರೆದು | ನಿನ್ನ | ನುತಿಸದೆ ಅತಿಶಯ ಜರೆದು | ತಮ್ಮ | ಗತಿಯೆಲ್ಲ ಅಲ್ಲಲ್ಲೆ ಮರೆದು || ಆಹಾ || ಚತುರಾನನ ಶ್ರೀ | ಪತಿನೋಡುತಲಿರೆ | ಪ್ರತಿಕಕ್ಷಿಯಲ್ಲಿ ಸಂ | ತತಿಯೆನಿಸಿಕೊಂಡೇ ||4|| ಇಂದ್ರಿಯಂಗಳ ನಿಯಾಮಕನೇ | ಗುಣ | ವೃಂದ ನಿರ್ಜರ ನಾಯಕನೆ | ಪಾಪ | ಸಿಂಧು ಬತ್ತಿಪ ಪಾವಕನೆ | ನಿಜ | ಬಂಧು ಸಂಶ್ರಿತ ತಾರಕನೇ ||ಆಹಾ || ಇಂದು ಮಹಾದಯ | ದಿಂದ ಗಂಗೆಯ ಕರ | ತಂದು ಉದ್ದರಿಸಿದ | ಇಂದ್ರಪ್ರಸ್ತನೇ ||5|| ಇನ್ನಾದರು ಕೇಳು ವಾಕು | ದೇವ | ಯೆನ್ನ ಕುತ್ಸಿತ ಮನ ನೂಕು | ಮುನ್ನೆ | ಘನ್ನ ಭಕುತಿಯ ನೀಡಬೇಕು | ಇಂತು | ಪುಣ್ಯಮಾಡಿಸಿ ಬಿಡದೆ ಸಾಕು ||ಆಹಾ || ಕಣ್ಣುಕಾಣದೆ ಘೋರಾ | ರಣ್ಯದಿ ಬಿದ್ದಿಹೆ | ಬನ್ನ ಬಡಿಸುವದು | ನಿನ್ನ ಧರ್ಮವಲ್ಲಾ ||6|| ಎಣೆಗಾಣೆನೊ ನಿನ್ನ ಪ್ರೇಮ | ಅನು | ಗುಣ್ಯವಾಗಲಿ ನಿಸ್ಸೀಮ | ಸುಪ್ರ | ಸನ್ನ ಶುದ್ದಾತ್ಮ ಧಾಮ | ಗುಣ | ಪೂರ್ಣ ಮಧ್ವ ಹನುಮ ಭೀಮ ||ಆಹಾ|| ಪನ್ನಂಗಾರಿ ವಾ | ಹನ್ನ ವಿಜಯವಿಠ್ಠ | ಲನ್ನ ಮೂರುತಿಯನ್ನು |ನಿನ್ನೊಳು ತೋರಿಸೋ||7||

Thoughts & Reflections

0

No reflections shared yet. Be the first to share your thoughts!

Share your thought