Bhasaka
← Back to home

ಪಶುಪತಿಯ ತೋರಮ್ಮಾ

Author: ವಿಜಯದಾಸCategory: ಶ್ರೀಶಿವ
ಪಶುಪತಿಯ ತೋರಮ್ಮಾ ವಶವಾಗಿ ಉದ್ಧರಿಸಮ್ಮಾ ವಿಷವ ಸವಿದ ರುಂಡಮಾಲನ ತ್ರಿಭುವನ ಪಾಲನ ಸತಿ ಮೈನಾಕ ನಂದನೆ ಮಾಡುವೆ ನಾನೀಗ ವಂದನೆ ಮತಿಯ ಕೊಡುತಿಪ್ಪ ಎನ್ನ ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ||1|| ಬುದ್ದ್ಯಾಭಿಮಾನಿ ದೇವಿ ಇಂದ್ರಾದ್ಯ ಸುರರನ್ನ ಕಾಯ್ವಿ ಖದ್ಯೋತ ಶಶಿ ಅನಳನೇತ್ರ ಸಾ ಮಂಗಳ ಗಾತ್ರನ ಧನಪತಿ ಮಿತ್ರನಾ ||2|| ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ ವಿಜಯವಿಠ್ಠಲರೇಯನ ದಾಸದಾಸನ ಕೈಲಾಸವಾಸನ ಜಗಕೆ ವಿಶೇಷನಾ ||3||

Thoughts & Reflections

0

No reflections shared yet. Be the first to share your thoughts!

Share your thought