Bhasaka
← Back to home

ಪಾದಾ ಭಕ್ತರನ ಪೊರೆವ ಪಾದಾ

Author: ವಿಜಯದಾಸCategory: ಶ್ರೀಕೃಷ್ಣ
ಪಾದಾ ಭಕ್ತರನ ಪೊರೆವ ಪಾದಾ ಪಾದಾ ಸಿರಿದೇವಿ ಉರದಲ್ಲಿ ಒಪ್ಪುವ ಪಾದಾ ಧರಣಿಪತಿ ಬಲಿಯನ್ನು ನೆಲಕೆ ಒತ್ತಿದ ಪಾದಾ ಸುರನದಿಯ ಹರುಷದಲಿ ಪಡೆದ ಪಾದಾ ಧುರದೊಳಗೆ ಪಾರ್ಥನ ಶಿರವ ಕಾಯ್ದ ಪಾದಾ ಸುರರು ಸನಕಾದಿಗಳು ವಂದಿಸುವ ಪಾದಾ ||1|| ಕೋಪದಲಿ ಉರಗನ ಪೆಡೆಯ ತುಳಿದ ಪಾದಾ ತಾಪಸರ ಮನಕೆ ನಿಲಕದ ಪಾದಾ ಭೂಪ ಕೌರವನ ತಲೆಕೆಳಗೆ ಮಾಡಿದ ಪಾದಾ ಕಾಪಾಲಿ ಪೂಜಿಸುವ ಕಡು ದಿವ್ಯ ಪಾದಾ||2|| ಹಸುಳೆತನದಲಿ ಶಕಟಾಸುರನನೊದೆದ ಪಾದಾ ಋಷಿಪತ್ನಿ ಶಾಪ ವಿಶ್ಶಾಪ ಪಾದಾ ವಿಷ ಕರ್ತು ರಿಪು ವಿನಾಶ ಕರದಿ ಮೆರೆವ ಪಾದಾ ವಸುಧಿಯೊಳು ವಿಜಯವಿಠ್ಠಲನ ಪಾದಾ||3||

Thoughts & Reflections

0

No reflections shared yet. Be the first to share your thoughts!

Share your thought