Bhasaka
← Back to home

ಪಾಲಿಸೆ ಪದುಮಾಲಯೆ, ನೀನೇ ಗತಿ

Author: ವಿಜಯದಾಸCategory: ಶ್ರೀಮಹಾಲಕ್ಷ್ಮಿ
ಪಾಲಿಸೆ ಪದುಮಾಲಯೆ, ನೀನೇ ಗತಿ ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ- ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ಅಪ ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ- ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣಸಂ ಪನ್ನ ರಕ್ಕಸನನ್ನು ಸೀಳಿದ ಪನ್ನಗಾದ್ರಿ ನಿವಾಸೆ ಹರಿಪ್ರಿಯೆ ||1|| ಅರಿಯದ ತರಳನೆಂದು ಶ್ರೀಪತಿ ಸತಿ ಕರುಣದಿ ಸಲಹೆ ಬಂದು ಕರುಣಾಸಿಂಧು ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖನು ಸುರರ ಬಾಧಿಸೆ ಹರಿವರರ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ ||2|| ಅಜ ಮನಸಿಜ ಜನನಿ ಅಂಬುಜಪಾಣಿ ಭುಜಗ ಸನ್ನಿಭವೇಣೀ ನಿತ್ಯ ಕಲ್ಯಾಣಿ ಕುಜನಮದರ್ನ ವಿಜಯವಿಠ್ಠಲ ಭಜಿಸಿ ಪಾಡುವ ಭಕ್ತಕೂಟವ ನಿಜದಿ ಸಲಹುವೆನೆಂಬ ಬಿರುದುಳ್ಳವಿಜಯಸಾರಥಿ ವಿಶ್ವಂಭರ ಪ್ರಿಯೆ ||3||

Thoughts & Reflections

0

No reflections shared yet. Be the first to share your thoughts!

Share your thought