Bhasaka
← Back to home

ಪಾಲಿಸೆನ್ನನು ದೇವಾ ಪರಮ ಪುರುಷಾ

Author: ವಿಜಯದಾಸCategory: ಶ್ರೀಕೃಷ್ಣ
ಪಾಲಿಸೆನ್ನನು ದೇವಾ ಪರಮ ಪುರುಷಾ ಭೂಲೋಲ ಶ್ರೀ ಮುಷ್ಣನಿಲಯ ಶ್ವೇತ ವರಹಾ ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ ಜಯಜಯದೇವನಾಶ್ರಯ ಕಾಮಧೇನು ನೀ ದಯಮಾಡಿ ನೋಡುವದು ದಾಸ ನೆನೆಸುವದು ||1|| ಚಿತ್ತಾವಧಾರು ಪರಾಕು ಬೊಮ್ಮಾಂಡವನು ಹೊತ್ತು ನಸುನಗು ನಾಗಾರಿಗಮನಾ ಮುತ್ತು ಮಣಿ ಮಯದಾಭರಣದಿಂದೆಸೆವ ದೇ ವೋತ್ತಮನೆ ದಾನವರ ಬಲವಳಿದಾ ಧೈರ್ಯ ||2|| ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು ಪ್ರತ್ಯಕ್ಷವಾಗಿ ವರಗಳನೀವುತ ಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹ ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ||3||

Thoughts & Reflections

0

No reflections shared yet. Be the first to share your thoughts!

Share your thought