Bhasaka
← Back to home

ಪಾಲಿಸೊ ಪತಿತಪಾವನ್ನಾ ನಿನ್ನ

Author: ವಿಜಯದಾಸCategory: ಶ್ರೀಕೃಷ್ಣ
ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ ||1|| ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ ಯೋಜನ ಗಂಧಿಯ ಬಸುರಿಲಿ ಬಂದ ಭವದೂರಾ ||2|| ನಿಂದ್ಯ ಕರ್ಮವು ಮಾಡಿದವನ ದೂತ ರಿಂದ ತರಿಸಿದೆ ತ್ರಿಭುವನಾ ಜಯ ವೆಂದು ಕೊಂಡಾಡಲು ಜವನಾ ಭೀತಿ ಯಿಂದ ಮಾಡಿದ ನಿನ್ನ ಸ್ತವನಾ -ಆಹ ಒಂದಾನಂತವಾಗಿ ದ್ವಂದ್ವಪಾಪಗಳಿಗೆ ನಿಂದಿರಬಲ್ಲವೆ ಸಂದರುಶನವಾಗೆ ||3|| ಕಂದುಕ ಪುಟಿ ಸೂತ ಬಳುಕಿ ದೈತ್ಯ ವೃಂದ ಮೋಹಕವಾಗಿ ಸಿಲುಕಿ ಸುರ ಸಂದೋಹಕೆ ನೀನೆ ಘಳಿಕಿ ನಿಜ ವೆಂದು ಮಾನವರಿಗೆ ಬಳಿಕಿ -ಆಹಾ ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ ||4|| ಹಂದಿ ನಾಯಿ ನರಿ ರಾಸಾ ಜನ್ಮ ಬಂದರೆ ಎನಗದು ಹರುಷಾ ಬಹು ಮುಂದುಂಟು ರಹಸ್ಯಾ ಮನಸಾಪೇಕ್ಷಾ ಸಂದೇಹ ಮಾಡಿಸೊ ಶ್ರೀಶಾ -ಆಹಾ ಚಂದ ಚಂದದಿ ಯೋನಿ ಸಂದೀದ ಕಾಲಕ್ಕು ಒಂದು ವಿಂಶತಿ ಮತ ಹೊಂದಿಸದಿರು ಹರಿ||5|| ಅಂಧಃಕಾರದೊಳೆನ್ನ ತಂದೆ ಇದ ರಿಂದ ನಿನಗೇನೊ ಮುಂದೆ ಲಾಭ ಬಂದಾದರೂ ಇಲ್ಲಾ ಇಂದೆ ಸುಖ ಸಾಂದ್ರ ಕಡಿಮೆನೊ ಮುಂದೆ -ಆಹಾ ||6|| ಇಂದಿರಾವರ ರಾಮ ಶಾಮಾ ರಾಮ ಚಂದ್ರ ಚತುರ ಸಾರ್ವಭೌಮಾ ದಿವ್ಯ ಚಂದನ ಸಿರಿ ಉರಪ್ರೇಮಾ ಮುಚ ಕುಂದ ಪಾಲಕ ನಿಸ್ಸೀಮಾ -ಆಹಾ ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ ||7|| ದುಂದುಭಿ ಭೇರಿಯ ರಭಸಾ ಮಹಾ ಸಿಂಧೂರ ವಿಚಿತ್ರ ಕೋಶಾ ದುರ್ಗಾ ಬಂಧುರಾ ನೆರೆದ ವಿಶೇಷಾ ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ ಕುಂದಗೊಡದೆ ಬೊಮ್ಮನಂದದಿ ಪಥತೋರಿ||8|| ಹಿಂದಣ ಬಲವನ್ನು ಕಾಣೆ ನಾನು ಅಂದು ನುಡಿದದ್ದು ಮಾಣೆ ಅನು ಬಂಧಗಳಿಗೆ ಕಾಮಧೇನೆ ಸತ್ಯ ವೃಂದಾವನ ಪತಿ ನೀನೆ -ಆಹಾ ನಂದತೀರ್ಥರಿಗೆ ಆನಂದ ಕೊಡುವ ಪೂರ್ಣ ಸನಕಸ ನಂದನ ಮನೋಹಂಸಾ ||9|| ಸಂದಣೆ ತೊಲಗದೆಂಬಿಯಾ ಆಹಾ ಬಂದರೆ ಬರಲಿ ಎಂಬಿಯಾ ಇದೇ ಸಂದಲಿ ಅನುಗಾಲ ನ್ಯಾಯಾ ಅನು ಸಂಧಾನ ನಿನ್ನಲಿ ಪ್ರೀಯಾ -ಆಹಾ ಇಂಧನದೊಳು ವಾಯು ವ್ಯಾಪಿಸಿದದ ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ ||10|| ಕಂದರ್ಪ ಕೋಟಿ ಲಾವಣ್ಯ ಅರ ವಿಂದ ನಯನ ಗುಣ ಗಣ್ಯ ದೀನ ಮಂದಾರ ಸತತ ತಾರುಣ್ಯ ಸರಿ ಬಂದಂತೆ ಮಾಡೊ ಕಾರುಣ್ಯ -ಆಹಾ ವಂದೆದೈವವು ನಾನೆಂದ ಮುರಾರಿಯ ಕೊಂದು ಬಿಸುಟಾಧೀರ ನಂದಕುಮಾರಕ||11|| ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ ರಂಧ್ರವು ಸುಜನಂಘ್ರಿ ತ್ರಾಣಾವಾಗಿ ಕುಂದಣ ಪುಟದಂತೆ ವರಣಾ ಕಂಬು ಕಂಧರ ಪೊಳಿಯಲಿ ವಚನಾ -ಆಹಾ ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ ವೊಂದಿಬರಲಿ ಮುಕುಂದಾ ಮುದ್ದುರಂಗಾ||12|| ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ ಯೆಂದು ಕುಣಿಯೊ ಎನ್ನ ಧೊರಿಯೆ ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ ವೃಂದಾರಕ ಪುಷ್ಪಗರಿಯೆ -ಆಹಾ ಇಂದಿನ ಉತ್ಸಾಹ ಇಂದ್ರಾದ್ಯರು ಪೂತು ರೆಂದು ಪೊಗಳೆ ನಗೆಯಿಂದ ನೋಡುವದೆ ||13|| ಮಧ್ವರಮಣ ಪಾಪಿ ಭಕ್ತಿ e್ಞÁನ ಸದ್ಧರ್ಮ ವೈರಾಗ್ಯಯುಕ್ತಿ ಕೊಡು ನಿದ್ರಾಹಾರಾ ಮತ ಭುಕ್ತಿ ಇತ್ತು ಮುದ್ರಧಾರನಾ ಮಾಡಿ ಮುಕ್ತಿ -ಆಹಾ ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ ರುದ್ರವಂದಿತ ಸಮುದ್ರಸುತೆಯ ಪತಿ ||14|| ಬಂಧೂರ ಕೀರ್ತಿ ಸಂಪನ್ನಾ ಕರಿ ಬಂಧ ವಿಮೋಚನ್ನ ನಾ ರಂದ ವರದ ಸುಪ್ರಸನ್ನಾ ಶತಾ ನಂದ ಕಾನನವಾಸಾ ಘನ್ನಾ -ಆಹಾ ಸಿಂಧುಜನಕನೆ ಪರಂಧಾಮತ್ರಯ ಸತ್ಯ ಸಂಧ ವಿಜಯವಿಠ್ಠಲೆಂದು ವದನ ಎನ್ನಾ||15||

Thoughts & Reflections

0

No reflections shared yet. Be the first to share your thoughts!

Share your thought