Bhasaka
← Back to home

ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ

Author: ವಿಜಯದಾಸCategory: ಶ್ರೀಕೃಷ್ಣ
ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ ಭುವನ ತ್ರಾಣ ಸದ್ಭವ ಪ್ರವೀಣ ಶ್ಲೋಕ : ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ | ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ || ಏನಾಶ್ಚರ್ಯ ನಿವೇದಕೀಯ ನಿನಗೆ ಶ್ರೀನಾಥನ ಪ್ರೀತಿಗೆ ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ||1|| ಪದ: ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ | ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ | ಹೀನನಾಗಿ ಪಾಪರಾಶಿಯ | ಮಾಡಿದೆನಯ್ಯಾ | ಮುಂದೇನೋ ಉಪಾಯ ||2|| ಶ್ಲೋಕ: ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು | ಕಾವಾ ಮಾಯಾದಿ ವೊನ್ಹವೆಂದು ಜನರು | ಜೀವಾತ್ಮಗೆ ಪೇಳ್ವಿರೊ || ಶ್ರೀ ವತ್ಯಾಂಕನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ | ಆವಾಗೆಲ್ಲರು ಕೂಡಿ ಊರ ಹೊರಗೆ ದೇವೇಶ ಕೊಂಡೊಯ್ವರೋ||3|| ಪದ: ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ | ದುರ್ವಿಷಯದಿ ಬರಿದೆ | ಸಂಸಕ್ತನಾಗಿ ನಾ ಭ್ರಮಿಸಿದೆ ಬುದ್ಧಿಸಾಲದೇ || ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ | ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ | ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ ||4|| ಶ್ಲೋಕ : ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ | ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು || ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ | ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ ||5|| ಪದ: ಅಂಜನೆಯುದರದಿ ಜನಿಸಿದಿ | ಹನುಮನೆನಿಸಿದಿ | ರಾಮದೂತ ನೀನಾದಿ ಕಂಜನಾಭನ ಮಾತು ಕೇಳಿದಿ | ವನಧಿ ದಾಂಟಿದಿ | ಲಂಕಾಪುರವ ನೈದಿದೀ|| ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ | ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ | ಆರ್ಭಟಿಸಿ | ರಕ್ಕಸರ ಸೀಳಿದಿ ||6|| ಶ್ಲೋಕ : ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ | ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ || ದೇವ್ಯಾದೇಶವ ಕೇಳಿ ಬಂದು ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ ||7|| ಪದ: ಸಹ ಭೋಗ ಕೊಟ್ಟನು ರಾಘವ | ನಿನಗೆ ಯೋಗ್ಯವ | ಬದಲು ಕಾಣದೆ ದೇವಾ ಅಹಿ ಪಾಶಾ ಮೋಹಿತ ಬಂಧವಾ | ಜನ ಸದ್ಭಾವ | ನೋಡಿ | ಗಂಧಮಾದನವ | ಮೋಹಿಸಿ ಕ್ಷಣಕೆ ಬಂದು ವೊದಗುವ | ನಿನ್ನ ವೇಗವ | ಪೊಗಳಲಾರೆನು ಭವ | ಮಹಿತ ಚರಣ ಸರಸಿರುಹವ | ನಿನ್ನ ಚರಣವ | ಮೊರೆ ಐದಿವರವ ||8|| ಶ್ಲೋಕ : ಕುಂತಿದೇವಿಯು ಮಂತ್ರದಿಂದ ಕರೆಯೇ | ಸಂತುಷ್ಟನಾಗಿ ಸ್ವಯಂ | ಕಾಂತಸ್ಪರ್ಶನ ಮಾತ್ರದಿಂದ ಧರೆಯೊಳ್ | ನಿಂತ್ಹಾಂಗೆ ನೀ ಹುಟ್ಟಿದಿ | ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ | ಎಂಥಾ ದೇಹವೊ ನಿಂದು ಅದ್ರಿ ಪುಡಿಯಾ | ಎಂಥ ಬಲವೆ ನಿನ್ನದು||9|| ಪದ: ನಾಮದಿಂದಲಿ ನಿನಗೆಲ್ಲರು | ತ್ರಿಜಗದ್ಗುರು | ಭೀಮಾಸೇನನೆಂಬುವರು | ಭೂಮಿಯೊಳಗೆ ನಿನಗೊಬ್ಬರು | ಸಮರಿಲ್ಲರು | ಧೃತರಾಷ್ಟ್ರನ್ನ ಸುತರು | ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು || ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು | ಭಕ್ತ ಸುರತರು | ಮೋಕ್ಷ ಮಾರ್ಗವ ತೋರು ||10|| ಶ್ಲೋಕ : ಕಕ್ಷಾ ವಾಸಕ ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ | ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ | ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ | ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ ||11|| ಪದ : ಭಾರತಿ ನಿನಗಾಗಿ ಬಂದಳು ವೇದವತಿಯಾಳು | ದ್ರುಪದಜೆ ಎನಿಸಿದಳು | ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು | ವರ ಸುಜನಾಭೀಷ್ಟ ಕೊಡುವಳು | ಧೀರನೆನವೆ ಹೃದಯದೊಳು ಹಗ ಲಿರುಳು | ಭಜನೆಗಳಿಪ್ಪನಂಘ್ರಿಗಳು ||12|| ಶ್ಲೋಕ : ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ | ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ || ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ | ಅಲ್ಲಿಂದಚ್ಯುತನಾಜ್ಞೆಯಿಂದವನಿಯೋಳ್ | ಪುಲ್ಲಾಕ್ಷ ಮತ್ತೈದಿದಿ||13|| ಪದ : ಪಾಜಕ ಕ್ಷೇತ್ರದಿ ಜನನವನು ಮತ್ತೈದಿ ನೀನು | ಮಧ್ಯಗೇಹಾರ್ಯನ ಸೂನು | ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು | ಅಚ್ಯುತಪ್ರೇಕ್ಷ ಎಂಬುವನು | ಸ್ರಜನಿಯನು ಸೇವಿಸಿ ತಾನು | ವರ ಪಡೆದನು | ಭಾವೀ ಶಿಷ್ಯ ನಿನ್ನನು | ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು | ತುರ್ಯಾಶ್ರಮವನು ಯಿನ್ನು ||14|| ಶ್ಲೋಕ : ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ | ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ || ಪೋರ್ವಾನಂದ ಸುತೀರ್ಥ ಮಧ್ವ ಎನಿಸಿ | ಗರ್ವೋಚಿಸಲ್ಲೋಕಕೆ | ನಿರ್ವಾಣಕ್ಕೆ ಸುಮಾರ್ಗ ತೋರಿದಿ ಮಹಾ | ಸರ್ವಜ್ಞ ಚೂಡಾಮಣಿ ||15|| ಪದ: ಕೃಷ್ಣನು ಗೋಪಿಚಂದನದಲ್ಲಿ ಬಂದು ಧರೆಯಲ್ಲಿ | ರಜತಪೀಠ ಪುರದಲ್ಲಿ | ವಿಷ್ಣು ತಾ ನಿಂದನು ನಿನ್ನಲ್ಲಿ | ದಯದಿಂದಲ್ಲಿ | ನೀ ಕಲಿಯುಗದಲ್ಲಿ | ವೃಷ್ಣೀಶನ ಮಾಡಿಸುತಲ್ಲಿ ಅನುದಿನದಲ್ಲಿ | ಇರುವಿ ಮತ್ತೊಂದರಲ್ಲಿ | ವಿಷ್ಣು ಕೃಪೆಯು ಎಷ್ಟು ಹೇಳಲಿ ದಿನದಿನದಲ್ಲಿ | ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ||16||

Thoughts & Reflections

0

No reflections shared yet. Be the first to share your thoughts!

Share your thought