Bhasaka
← Back to home

ಪುಣ್ಯ ದೊರಕುವುದು

Author: ವಿಜಯದಾಸCategory: ಶ್ರೀಕೃಷ್ಣ
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ದೊಡಿಯಗರ್ಪಿತವೆಂದು ಹಿಗ್ಗುತ ಅನುದಿನ ||1|| ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ದ್ವ್ವಿಪುತ ಪ್ರಾಕಾಶವಂತಳಾಗಿ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ||2|| ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ದೇವದೇವೆಶನ್ನ ವಿಭೂತಿ ರೂಪವ ಆವಾವ ಬಗೆಯಲ್ಲಿ ನೆನೆಸಿ ನೋಡುತ ನಿತ್ಯ ||3|| ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ ||4|| ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಅತಿಶಯವಾಗಿ ತನ್ನಯ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ ||5|| ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ ||6|| ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಸಂತೋಷಮತಿಯಲ್ಲಿ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ ||7|| ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ ||8|| ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ ||9||

Thoughts & Reflections

0

No reflections shared yet. Be the first to share your thoughts!

Share your thought