Bhasaka
← Back to home

ನೀನೆಲ್ಲಿಗೆ ಹೋಗಬೇಡಯ್ಯ

Author: ಆಂಜನಪ್ಪ ಸ್ವಾಮಿCategory: ಶ್ರೀಹನುಮಂತRaaga: ಮಧ್ಯಮಾವತಿTaala: ತೇವರಾ
ನೀನೆಲ್ಲಿಗೆ ಹೋಗಬೇಡಯ್ಯ ಓ ಆಂಜನೇಯ || ನೀನೆಲ್ಲಿಗೆ ಹೋಗಬೇಡ ನನ್ನನ್ನು ಬಿಡಬೇಡ | ನೀನಿದ್ದ ಗೃಹದಲ್ಲಿ ನನ್ನನ್ನು ಇರಿಸಯ್ಯ || ಅಷ್ಟಾಂಗಯೋಗವ ಮಾಡಿ ಆರು ಬೀದಿ ತಿರುಗಿ ನೋಡಿ | ಕಷ್ಟಪಡುವುದು ಯಾಕೊ ಸೃಷ್ಟಿಶೀಲ ರೂಪದೇವ || ಸಾಮಾನ್ಯವಾದದ್ದಲ್ಲ ಸಾಮುದ್ರ ಸಂಸಾರವು | ಸಾಧಿಸಿ ಸಾಧಿಸಿ ಪ್ರಜರು ಸಾಂಖ್ಯಯೋಗ ತಿಳಿಯಲಿಲ್ಲ|| ಧರೆಯೊಳು ಘಟ್ಟಿಹಳ್ಳಿಪುರವು ಭಕ್ತ ಆಂಜನೇಯ ಸ್ವಾಮಿ | ನೀನು ನಾನು ಒಂದಾಗಿ ಹೋಗೋಣ ತಿರುಪತಿಗೆ ||

Thoughts & Reflections

0

No reflections shared yet. Be the first to share your thoughts!

Share your thought