Bhasaka
← Back to home

ಪುರಂದರ ಗುರುರಾಯ

Author: ವಿಜಯದಾಸCategory: ಇತರೆ
ಪುರಂದರ ಗುರುರಾಯ ಪುರಂದರ ಗುರುರಾಯ ಪೂರ್ಣ ಗುಣಾಂಬುಧೆ ಶರಣಜನ ಪರಿಪಾಲಾ ಸುಸ್ಸೀಲಾ ಕಲಿ ವಿಪ್ರಜಿತು ದ್ವಾಪರ ಮಧು ಕೈಠಭ ಖಳರು ಬಂದಾಗೆ ಅಪಾರ ಸುಲಭ ಮಾರ್ಗಕೆ ಎನ್ನ ಸುಳಿಯಲೀಸದೆ ತಮ್ಮ ಬಳಗಾ ಹರಿಯಬಿಟ್ಟು ಕಳವಳಿಸುವ ಚಂಚಲತನವಿತ್ತು ಕ ತ್ತಲೆಯೊಳು ಪೊಗಿಸುವ ಮಾಯಾ ಕತ್ತರಿಸುವ ಪ್ರೀಯಾ||1|| e್ಞÁನ ಭಕುತಿ ವಿರಕುತಿ ಸರ್ವದಯಿತ್ತು ಮಾಣಿಸುವುದು ದುರ್ಮತೀ ನೀನೋಲಿದು ಯಿಂದು ಅನಂತ ಜನುಮಕ್ಕೆ ದಾನವಾರಿಯ ಪಾದ ಧ್ಯಾನವೆ ಮಾಡುವ ಆನಂದವನೆ ಕೊಡು ನಾನಾ ಬಗೆಯಿಂದ ಗುರುವೆ ನಿತ್ಯಸರು ತರುವೆ ||2|| ಈ ದೇಹ ಬಂದದೆ ಪಂಚ ಭೇದವೆ ತಿಳಿಸಿ ಮೋದವೆ ಕೊಡು ಪ್ರಾಪಂಚ ಖೇದವೆ ಖಂಡಿಸಿ ಆದರಿಸುವದಪರಾಧವಗಳೆಣಿಸದೆ ಸಾಧುಗಳಡಿಯಲಿ ಕಾದುಕೊಂಡಿಹ್ಯ ವಿ ನೋದವೆ ಕರುಣಿಸು ವಿಜಯವಿಠ್ಠಲನ ಪ್ರೀಯಾ||3||

Thoughts & Reflections

0

No reflections shared yet. Be the first to share your thoughts!

Share your thought