Bhasaka
← Back to home

ಪೂರ್ಣಪ್ರಜ್ಞನೆಂಬ ಪರಿಪೂರ್ಣ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ಪೂರ್ಣಪ್ರಜ್ಞನೆಂಬ ಪರಿಪೂರ್ಣ ಸುಜ್ಞಾನ ಸಮುದ್ರ ಮಧ್ವಮುನಿರಾಯ || ವಾರಣದಿಂದಲಿ ಬಂದೆ ವಾದಿಯ ನಿವಾರಿಸಿದ | ಮಧ್ವ ಮುನಿರಾಯಾ ಮಣಿವಂತನೆಂಬೊ ದೈತ್ಯ ಧಾರುಣಿಯೊಳಗೆ ಸಂಕರನಾದಾ | ಮಧ್ವರಾಯಾ || ಅವ | ಜನಿಸಿ ಬಂದು ಉತ್ತಮರ ಗುಣಗಳಲ್ಲ ಕೆಡಿಸಿದಾ | ಮಧ್ವರಾಯಾ ||1|| ಹರಿಯಿಲ್ಲ ಗುರುವಿಲ್ಲ ಹರನು ಪುಸಿ ಎಂದು || ಮಧ್ವ | ಅವ | ಪರದೈವ ತಾನೆ ಎಂದು ಧರೆಯೊಳು ತಿರುಗಿದ | ಮಧ್ವ ||2|| ವೇದಶಾಸ್ತ್ರವೆಲ್ಲ ಮಿಥ್ಯ ಅಹಂ ಬ್ರಹ್ಮ ಜಗಕೆಂದ | ಮಧ್ವ || ಅವ | ಭೇದಾಭೇಧ ಇಲ್ಲ ಹೆತ್ತ ತಾಯಿ ಸತಿ ಒಂದೆ ಎಂದು ಮಧ್ವ ||3|| ಜಾತಿಧರ್ಮವೆಲ್ಲ ತೊರೆದು | ಜಾತಿ ಸಂಕರವಾಗೆ ಮಧ್ವ || ಭೂತಳದೊಳಗೆ ಮಿಥ್ಯ ಪಾತಕವೆ ತುಂಬಿತು | ಮಧ್ವರಾಯ ||4|| ಸುರರು ಚಿಂತಿಸಿ ಪೋಗಿ | ಪರಮೇಷ್ಠೆಗೆ ಪೇಳಲು | ಮಧ್ವ ||ಬೊಮ್ಮ | ಪರಿಹರ ಕಾಣದೆ ಹರಿಗೆ ಬಿನ್ನೈಸಿದ | ಮಧ್ವ||5|| ಜಯ ತನಯನ್ನ ಕರೆದು | ದಯದಿಂದ ಪೇಳಲು | ಮಧ್ವ || ವೇಗ | ಪ್ರಿಯದಲ್ಲಿ ಬಂದು ಮಧ್ಯಗೇಹನಲ್ಲಿ ಅವತರಿಸಿದ | ಮಧ್ವ ||6|| ಮುಖ್ಯ ಶಿಷ್ಯ ತಿಪ್ಪಣ್ಣ ಅವಧಾನಿ ಸೋತು ವೈಷ್ಣವನಾಗೆ | ಮಧ್ವ || ಮಾಯಾ ಶಕ್ಯವಲ್ಲವೆಂದು ಸೋತು | ಸಂಕರ ಮೂಲಿಯ ಪೊಕ್ಕ | ಮಧ್ವ ||7|| ಶುಂಠ ಮಿಕ್ಕ ರಕ್ಕಸರ ಗಂಟಲ ಮುರಿದುವಟ್ಟಿ | ಮಧ್ವ || ಉಂಟು ಮಾಡಿದನು ವೈಕುಂಠ ಪತಿದೇವವೆಂದು | ಮಧ್ವ||8|| ಮರುತ ಮತ ಉಧ್ಧರಿಸಿ | ಗುರುಕುಲ ತಿಲಕನಾದ | ಮಧ್ವ || ಶಿರಿ ವಿಜಯವಿಠ್ಠಲನ್ನ ಚರಣಾಬ್ಜ ಭೃಂಗನಾದ ಮಧ್ವ ||9||

Thoughts & Reflections

0

No reflections shared yet. Be the first to share your thoughts!

Share your thought