Bhasaka
← Back to home

ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ | ಆನಂದ ಜನನದಲಿ ಜನನಗಳ ನೀಗಿರೊಪ ಮಲಗಿ ಏಳುವಾಗ ಮಾತುಗಳನಾಡುವಾಗ | ಇಳಿಯ ಮೇಲಡಿಯಿಟ್ಟು ತಿರುಗುವಾಗ || ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ | ಮಲಿನ ಸಂಕರನಳಿದಮಲಬೋಧನ ನೆನೆಯಿರೊ ||1|| ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ | ಪಾವಕಾವನಿ ಸುರರ ಉಣಿಸುವಾಗ || ಕೋವಿದರ ಸಂಗಡ ಸಂತೋಷಬಡುವಾಗ | ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ||2|| ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ | ಪ್ರತಿ ದಿವಸ ಷಟ್ಕರ್ಮ ಮಾಡುವಾಗ || ಪತಿತ ಪಾವನ ವಿಜಯವಿಠ್ಠಲನ ಭಜಿಪ ಸದಾ ಗತಿಯಾದ ಸುಜನರಿಗೆ ಯತೀಶ್ವರನ ನೆನೆಯಿರೊ||3||

Thoughts & Reflections

0

No reflections shared yet. Be the first to share your thoughts!

Share your thought