Bhasaka
← Back to home

ಪೇಳುವೆ ಮನವೆ ನಿನಗೊಂದು

Author: ವಿಜಯದಾಸCategory: ಶ್ರೀಕೃಷ್ಣ
ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು ||1|| ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವ ಮೆಟ್ಟು ||2|| ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು ||3|| ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು ||4|| ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಹುಚ್ಚಾದರೆ ಫಲವಿಲ್ಲ ಮುಂದೆ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ ||5||

Thoughts & Reflections

0

No reflections shared yet. Be the first to share your thoughts!

Share your thought