Bhasaka
← Back to home

ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು

Author: ವಿಜಯದಾಸCategory: ಶ್ರೀಕೃಷ್ಣ
ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು ತ್ರಾಣ ತ್ರಾಹಿ ತಾತಾ ದಾತಾ | ನಾನಾ ಯೋನಿಯಲಿ ಬಂದೆ ನೊಂದೆ ಗುರುವೆ ನೀನೆ ಗತಿಯೊ ಭರತ ಭಾರತಿರಮಣ ಭಾರತ ಪ್ರತಿಪಾದ್ಯ ಭರತ ಕುಲೋತ್ತಮ ಭವ್ಯ ಭರದಿಂದಲಿ ಎನ್ನಭಾರ ವಹಿಸುವ ಭರಣ ಭಾರದ್ವಾಜಾತ್ಮಜ ಭಾರಭಂಗಾ ||1|| ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ ಕ್ಷಿತಿ ಲೋಕಾಂತದಲ್ಲಿ ಬಳಲಿ ಮತಿಯ ಕಾಣದೇ ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ||2|| ಪಂಚಾಹುತಿಯಲಿ ಹಾಕದಿರೋ ಜೀವೇಶ ಸಂಚಿತಾವಳಿ ಸರ್ವನಾಶಾ ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ ಸಂಚಕನೆ ಪುರುಷಾಕಾರನೀಯೋ ||3|| ಅಪೂಪ ಬಹುರೂಪ ಹರಿಚಾಪ ಪ್ರತಾಪ ಕಪಿಕುಲಾಂಬುಜ ದಿನಪ ಸುರಪ ರಿಪು ವಿಪಿನಕಾಲ ಮಹಾ ಗುಪುತ ವ್ಯಾಪ್ತ ಸುಪ್ತಿ ಸ್ವಪನ ಜಾಗೃತಕಾರ್ಯಫಲದಾ4 ತೇಜೋದಕ ಅನ್ನ ಚತುರ್ವಿಂಶತಿ ತತ್ವದಲಿ ರಾಜಿಸುವ ರಾಗವಿದೂರಾ ವಾಜಿರೂಪ ವಾಶಿಷ್ಟ ವಂದ್ಯಾ ವರದಾ ಮಜ್ಜಗದ್ಗುರು ಮುಖ್ಯ ಪ್ರಾಣಾ ||5|| ಪೂರ್ವೋತ್ತರಂಗ ಸಂಧಿ ಸಂಧಾನ ವಿಶಿಷ್ಟಾ ಈರ್ವ ಸ್ಥಾನದಲಿ ನೀನೇ ಸರ್ವದಲಿ ಧ್ಯಾನವನು ಇತ್ತು ಪಾಲಿಸು ನಿತ್ಯ ಗೀರ್ವಾಣ ಜ್ಯೇಷ್ಠ ಶ್ರೇಷ್ಠ ಮೂರ್ತಿ |6|| ಮಾನವ ಪವನ ಪವಮಾನ್ ಮಾನವ ರೂಪಾ ಮಾನಾಭಿಮಾನಿಗಳೊಡಿಯಾ ಆನಂದತೀರ್ಥಪದ ಭಕ್ತ ಅನಾಥಬಂಧು ವೈರಾಗ್ಯ ||7|| ನಾಮಾದಿ ವಿಡಿದು ಪ್ರಾಣಕಳೆಗಳತನಕ ಸಮಸ್ತ ಪರಮಾಣು ತಿಳಿಸೋ ಕಾಮಿಸುವನೆ ಇದನೆ ಹೃತ್ಕಮಲದೊಳಗಿದ್ದ ಸಾಮ ಸೂರ್ಯಸ್ಥಿತನೆ ಸೂತ್ರಾ8 ಇಪ್ಪತ್ತೆರಡು ಸ್ಥಾನದಲಿ ಪ್ರಭುವೆ ಜಗ ದಪ್ಪ ಚತುರದ್ವಾರವಾಸ ಅಪ್ರತಿಮಲ್ಲ ಶ್ರೀ ವಿಜಯವಿಠ್ಠಲನ್ನ ಅಪ್ಪಿಕೊಂಡು ಮೆರೆದ ಧೀರಾ ||9||

Thoughts & Reflections

0

No reflections shared yet. Be the first to share your thoughts!

Share your thought