Bhasaka
← Back to home

ನೀನೇ ದಯಾಮಯ

Author: ವಚನವೇದCategory: ಪರಬ್ರಹ್ಮRaaga: ಮಿಶ್ರ ಮಧುವಂತೀTaala: ತ್ರಿತಾಲ
ನೀನೇ ದಯಾಮಯ ಇನ್ನಾರಿರುವರು ನಿನ್ನಂದದ ಹಿತಕಾರಿ | ನೋವು ನಲಿವಿನಲಿ ಸಮೀಪ ಬಂಧುವು ಶೋಕ - ತಾಪ - ಭಯಹಾರಿ || ಸಂಕಟಪೂರಿತ ಮೋಹಭವಾರ್ಣವ - ದುತ್ತರಣಕೆ ನೀ ಸಹಕಾರಿ | ಪ್ರಸನ್ನವಾಗಿಸು ಈ ಬಿರುಗಾಳಿಯ ರಿಪುದಲ ವಿಪ್ಲವಕಾರಿ || ಪಾಪದಹನ ಪರಿತಾಪವನಾರಿಸು ವರ್ಷಿಸು ಶೀತಲವಾರಿ | ಎಲ್ಲರು ತ್ಯಜಿಸುವ ಅಂತಿಮಕಾಲದಿ ನೀನೇ ಆಶ್ರಯಕಾರಿ ||

Thoughts & Reflections

0

No reflections shared yet. Be the first to share your thoughts!

Share your thought