Bhasaka
← Back to home

ಬಂದದೆ ಎನಗೆ ಬರಿದೆ ದೂರು

Author: ವಿಜಯದಾಸCategory: ಶ್ರೀಕೃಷ್ಣ
ಬಂದದೆ ಎನಗೆ ಬರಿದೆ ದೂರು ಬಂದೊಂದು ಅವಗುಣದವನೆಂಬೊ ಮಾತು ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು ತಾಮಸ ಬುದ್ಧಿ ವಿಶೇಷವಾಗಿ ಕಾಮುಕವಾಗಿ ನಡವಳಿ ನಡಸಿದ ಈ ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ ||1|| ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ ನನ್ನ ನಿನ್ನದು ಎಂಬೊ ಬಡದಾಟವು ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ ||2|| ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ ವನುರುತರ ರೂಪಿಗೆ ಸೋತು ಆತು ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ ತನವು ಮಾಡಿದಾತಾ ಕೃಷ್ಣನೊ ನಾನೊ ||3|| ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು ಪ್ರೀತಿಯಲಿ ಅತಿಥಿಗಳ ವಂದಿಸದೆ ಯಾತಕ್ಕೆ ಬಾರದಾ ಚರಿತೆ ನಡೆವಂಥ ಚೇತನ ಕಲ್ಪಿಸಿದ ಕೃಷ್ಣನೊ ನಾನೊ ||4|| ಆವಾವ ದುಷ್ಕರ್ಮಗಳ ಮಾಡಿ ಉತ್ತಮ ದೇವ ಬ್ರಾಹ್ಮಣರ ಪೂಜಿಸಲಿಲ್ಲವು ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ ||5||

Thoughts & Reflections

0

No reflections shared yet. Be the first to share your thoughts!

Share your thought