Bhasaka
← Back to home

ಬಂದರು ಹರಿಯ ವಾಲಗಕೆ ಭಕ್ತ

Author: ವಿಜಯದಾಸCategory: ಶ್ರೀಕೃಷ್ಣ
ಬಂದರು ಹರಿಯ ವಾಲಗಕೆ ಭಕ್ತ | ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು ನಾಗಜ ನಾಗಾರಿ ಸುತ ಬಂದ | ನಾಗ ಚರ್ಮಾಂಬರ ನಾಗಾರಿ ಬಂದಾ | ನಾಗಾನ ಧನು ಬಂದ ನಾಗಪುಂಗವ ಬಂದ | ನಾಗಾರಿ ಗಮನ ಬಂದ | ನಾಗ ಬಂದಾ || ||1|| ನಾಗಶಯ ಮುಖವಾದ ನಾಗವಾಹನ ಮಿತ್ರ | ನಾಗ ಚರ್ಮಾಂಬರ ಸಖನು ಬಂದಾ | ನಾಗಾರಿ ಸುತೆಯಳನಾಳಿದವನು ಬಂದಾ | ನಾಗ ಭಕ್ಷಕನು ನಾಗಾರಿ ಬಾಂಧವ ಬಂದಾ ||2|| ನಾಗದ್ವೇಷಿಕನು ನಾಗಾನಾದನನುಜ | ನಾಗಕೇತನನ ಕೊಂದಗ್ರಜನು ಬಂದಾ | ನಾಗಶಯನ ಸಿರಿ ವಿಜಯವಿಠ್ಠಲರೇಯ | ನಾಗವಾಹನನಾಗಿ ಬರುವ ಸಂಭ್ರಮದೊಳು ||3||

Thoughts & Reflections

0

No reflections shared yet. Be the first to share your thoughts!

Share your thought