Bhasaka
← Back to home

ಬಂದು ಕಂಡೆನೊ ಇಂದು

Author: ವಿಜಯದಾಸCategory: ಶ್ರೀಶಿವ
ಬಂದು ಕಂಡೆನೊ ಇಂದು | ಇಂದುಧರನ ಪಾದದ್ವಂದ್ವಗಳನು ದಿನವು | ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು | ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಸತಿಗೆ ಅರ್ಧಕಾಯ ಹಿತದಿಂದಲಿ ಇತ್ತು | ಚತುರತನದಲಿಳೆಯೊಳು ಪತಿತ ಮಾನವರಿಗೆ | ಮತಿಬಾಹದೊ ಮಾನಸ ಸತತ ದೃಢವನೀವ | ಪ್ರತಿದಿನದಲಿ ಕಾಯ್ವಾ ||1|| ವಿಷವ ಧರಿಸಿ ಸುಮನಸರ ನಡುವೆ ಮೆರೆದೆ | ಪಶುವಾಹನ ಪರಮೇಶ ಅಸುರಾರಿಗಲ್ಲದ | ಅಸುರರ ಕೊಲ್ಲುವ ರಂಜಿಸುವಾ | ಶಶಿ ಜಟಾ ಕಮನೀಯ ಮಣಿಮಕುಟಾ ||2|| ಕಡಲ ತಡಿಯವಾಸ | ವೊಡಿಯ ರಾಮನ ದಾಸ | ಮೃಡರುಂಡ ಮಾಲಾಭೂಷಾ || ಬಿಡದೆ ಸೇತುಬಂದ ವಿಜಯವಿಠ್ಠಲನ | ಅಡಿಗಡಿಗೆ ನೆನೆಸುವ ಶಿವರಾಮಲಿಂಗಾ ||3||

Thoughts & Reflections

0

No reflections shared yet. Be the first to share your thoughts!

Share your thought