Bhasaka
← Back to home

ಬಂದು ನಿಂದಾ ಕಣ್ಣ ಮುಂದೆ

Author: ವಿಜಯದಾಸCategory: ಶ್ರೀಕೃಷ್ಣ
ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ ಬಂದು ನಿಂದಾ ಭಾಗವತರ ಪ್ರಿಯಾ | ಕಂದರ್ಪಜನಕ ಶ್ರೀ ಕರುಣಾಸಾಗರ ಮೂರ್ತಿ ಕುಟಿಲ ಕುಂತಲ ದೇವ | ವಟು ವೇಷದಿಂದಲಿ || ನಟನೆ ಮಾಡುತ ದಿವ್ಯ | ಪಟುತರದಲಿ ತಾನು ||1|| ಮುರಳಿನೂದುತ್ತ | ಮರುಳುಗೊಳಿಸಿ ಜನರ || ಕೊರಳ ಪದಕಹಾರ | ಧರಿಸಿ ತಾ ನಲಿಯುತ ||2|| ಸುಜನರ ಪೊರೆಯುವ | ಕುಜನರ ತರಿಯುವ | ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ||3||

Thoughts & Reflections

0

No reflections shared yet. Be the first to share your thoughts!

Share your thought