Bhasaka
← Back to home

ಬಂದೆ ನಾ ನಿಂದೆ ಇಂದೇ

Author: ವಿಜಯದಾಸCategory: ಶ್ರೀಕೃಷ್ಣ
ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ | ಬಿಂದು ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪುರುಹೂತ ಜಾತ ಸೂತ | ಸರಸಿಜ ತಾತಾ | ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ ಚರಣವ ನಿರುತರ ನೆರೆನಂಬಿದೆ | ದು ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ ||1|| ಕರಿ ಪಾಶ ನಾಶ ಈಶಾ | ವರ ಮೂರ್ತಿ ವರದೇಶಾ ಶರಣರ ಪರಿತೋಷಾ | ತರತಮ್ಯ e್ಞÁನ ಕೋಶ | ಹಹ | ಪುರಹರಗೀಕಾಶಿಪುರ ಕರುಣಿಸಿದ ಸುಂ | ದರಗಾತುರ ಗೋತುರ ಧರ ಧರಣೀಶಾ ||2|| ಅವಿಮುಕ್ತಿ ಕ್ಷೇತ್ರವಾಸಾ | ನವನವ ಗುಣಭೂಷಾ | ಅವಿಕಾರ ನಾನಾ ವೇಷಾ | ರವಿಜವನ ಪೊರೆವ ಮಿರುವ ಮಹಸತ್ಕಥಾ ಶ್ರವಣವೆ ಕೊಡು ಕೇಶವ ವಿಜಯವಿಠ್ಠಲಾ ||3||

Thoughts & Reflections

0

No reflections shared yet. Be the first to share your thoughts!

Share your thought