Bhasaka
← Back to home

ಬಡನಡುವು ಬಾಲೆಯರ ಕೂಡಿ

Author: ವಿಜಯದಾಸCategory: ಶ್ರೀಕೃಷ್ಣ
ಬಡನಡುವು ಬಾಲೆಯರ ಕೂಡಿ ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ಪಾಲ್ಗೊನಿಗೆ ಬಂದಿರಲು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ ||1|| ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ | ಹನ್ಮಾಲೆ ಪದಕ ನ್ಯಾವಳ ಸರಿಗೆಸರ ಮುತ್ತು | ಪೊನ್ಮಾಣಿಕದ ವಾಲೆ ಪೊಂಪುಷ್ಟ ಬುಗುಡಿ ಥೋ | ರನ್ಮುತ್ತು ನಾಸಾಮಣಿ | ಅರರೆ | ಮನ್ಮನೋಹರವಾದ ಕಡಕ ಕಂಕಣ ಮುದ್ರೆ | ಸನ್ಮೋಹನಾಂಗಿಯರು ಸರ್ವಾಭರಣವಿಟ್ಟು | ಮನ್ಮಥನ ಹಿಡಿದೇಜಿ ಕುಣಿವಂತೆ ಮುಂದೊರಿದು | ಕಣ್ಣಂಚಿನಿಂದ ಜಗವೆಲ್ಲ ಬೆಳಗುತಲಿ ||2|| ಕರ್ಪುರದ ವೀಳ್ಯೆಯವ ಮೆಲುತ ನಾನಾ ಬಗೆ | ವರ್ಪುಣವು ಮೃಗನಾಭಿ ಅಗರು ಶಿರಿಗಂಧ | ಸಾರ್ಪರಿಮಳ ಸಕಲ ದ್ರವ್ಯದಿಂದೋಕುಳಿಯ | ಮಾರ್ಪೆಸರು ಬಾರದಂತೆ | ಅರೆರೆ | ಕರ್ಪಾಣಿಯೊಳಗೆ ದ್ವೀಪಾಂತರದ ತರ ನಿಲುವ | ದರ್ಪಣವ ಪಿಡಿದು ಸರ್ವಾಂಗ ನೋಡಿಕೊಳುತ | ದರ್ಪ ತಗ್ಗಿಸದಲೆ | ಪೊನ್ನುಡೆಗಳ ತುಡುಕಿ ಕಂ | ದರ್ಪನಪ್ಪನ ಮೇಲೆ ಗುಪ್ಪಿರರು ಮುದದೀ ||3|| ಮೇಲ್ಮೇಲು ಸೊಗಸು ಚನ್ನಿಗರಾಯನಿಲ್ಲ ನಿಲೂ ನೀಲ್ಮೇಘ ವರ್ಣಾನೆ | ಕಾಲ್ದೆಗೆದು ನಮ್ಮಮ್ಮ | ತೋಳ್ಮದವ ತೀರಿಸದೆ ಪೋಗದಿರು ಭಡಭಡಾ | ಕಾಲ್ಮೇಲೆ ಕರವ ತೆಕ್ಕೊ | ಅರೆರೆ | ತಾಳ್ಮದತಿಗತಿಯಂತೆ ಹೆಜ್ಜೆಯ ನಿಡುತ | ಪಾಲ್ಮೊಸರು ಕದ್ದ ಬಗೆ ಎಲ್ಲ ಪೊಸತೆನುತ ಸತಿ | ಜಾಲ್ಮೊಗದು ವಾರಿಧಿಯ ಥೆರೆಯಂತೆ ಮೂದಲಿಸಿ | ಆಳ್ಮಾತಿಲಿಂದ ಹೈ ಎನುತ ಚಲ್ಲಿದರೂ||4|| ಪೆಣ್ಗಳಿರಾ ನಿಮಗೇಕೆ ಪ್ರಬಲತನವೆಂದೆನುತ | ಅಣ್ಗದಾ ಗೋವಳರ ನಡುವೆ ವಪ್ರ್ಪಿರ್ದಸು | ವಣ್ಮಾತ್ರ ಪರಮಾತ್ಮನೀಕ್ಷಿಸಿದ ಅವರವರ | ಕಣ್ಗೊರಳ ಕುಚ ತೊಡೆಗಳ | ಅರೆರೆ | ಬನ್ಗಾಡಿವ ಭಗವಂತ ಹೃತ್ತಾಪ ಹರಿಸುವ | ಚಿನ್ಗೋಲಿಯಲಿ ಸಿರಿ | ಸರ್ರನೆ ಓಕಳಿ ಚಲ್ಲೆ | ಸಣ್ಗೊಲ್ಲತಿಯರು ಬೆರಗಾಗಿ ಮರಳೆ ಹರಿಯ | ಬೆಣ್ಗಳ್ಳನೆಂದು ಮುತ್ತಿದರು ಹಾಸ್ಯದಲಿ ||6|| ತೋರ್ಕೈಯ ಬಚ್ಚಿಡದೆ ಪಳ್ಳಿಗನೆ ಠಕ್ಕಿಸದೆ | ಮಾರ್ಕರೆದುಕೋ ನಿನ್ನ ಗೆಳೆಯರನ ಒಂದಾಗಿ | ಸೂರ್ಕುದೇಗಂತೆ ಸರ್ವೋದ್ಧಾರಗರದ ವೈ | ಜೀರ್ಕೋಳಲಿ ತೆರವಿಲ್ಲದೆ | ಅರೆರೆ | ಅರ್ಕನರ್ಕಕೆ ವಾರಿ ಇಂಗಿ ಪೋಗುವಂತೆ | ನರ್ಕಾಂತಕನ ಕಾಯದೊಳಗೆ ಓಕುಳಿಯಡಗೆ | ಅರ್ಕಾದ್ರಿಯಂತೆ ಶಿರಿ ಕೃಷ್ಣರಾಜಿಸುತಿರೆ | ತರ್ಕೈಪ ಭರದಿಂದ ನಾರಿಯರು ಇರಲು ||7|| ಹಸ್ತ ಲಾಘವ ನೋಡಿ ತಲೆದೂಗಿ ನಕ್ಕು ಸ | ಮಸ್ತ ನಾರಿಯರಿಟ್ಟು ಉಟ್ಟ ಮಂಗಳವಸನ | ವಸ್ತುಗಳು ಜಿಗಳುವಂತೆ ಓಕುಳಿಯಿಂದ | ವಿಸ್ತಾರವಾಗಿ ಉಗ್ಗೆ | ಅರೆರೆ | ಕಸ್ತೂರಿಮೃಗದಂತೆ ಸುಳಿಸುಳಿಯ ನಿಂದಿರ್ದ| ಹಸ್ತಿಗಮನಿಯರೊಡನೆ ಕ್ರೀಡೆಯನು ಪರಾತ್ಪರ | ವಸ್ತು ಲಕುಮಿಯ ರಮಣ ಆಡುತಿರೆ ನಾಲ್ಕೈದು | ಮಸ್ತಕಾದ್ಯರು ವಿಸ್ತರಿಸಲರಿದೆನಲು ||8|| ಸುಕ್ಕದೆ ಕುಚಗುಳುಬ್ಬಿ ಕಕ್ಕಸವಾಗೆ ಹೆಜ್ಜೆ | ಇಕ್ಕಲಾರದೆ ವಿರಹತಾಪದಿಂದೀಕ್ಷಿಸುತ | ವಖ್ಖಣಿಸುವ ಮಾತು ಹಿಂದಾಗುತಿರೆ ಕಲೆಗ | ಳುಕ್ಕೇರಿ ಬೆವರುತಿರಲು | ಅರೆರೆ | ಅಕ್ಕಕ್ಕೊ ಎಂದು ಅಕ್ಕೋಜಗೆಗೊಳ್ಳುತ್ತ ತಾ | ರಕ್ಕಿಯಂತೆ ಕೃಷ್ಣ ಸುತ್ತ ವಲ್ದರು | ಸಕ್ಕರೆದುಟಿ ಚಲುವ ಉಡುಪನಂತೆ ವಪ್ಪೆ | ದಕ್ಕಿವನಂತೆ ಸಂತರಿಸುತಲಿ ಇಂದೂ ||9|| ಬೆರ್ದೋಕಳಿಯನಾಡಿ ಸರಿ ಮಿಗಿಲು ಎನಿಸಿ ಕೆಲ | ಸಾರ್ದಿರ್ದ ನಾರಿಯರ ಶಿರವ ತಡವರಿಸಿ ಶತ | ಸಾರ್ದವೆಲೆ ಉಳ್ಳ ಉಡುಗೊರೆನಿತ್ತು ಮನ್ನಿಸಿ | ಮೀರ್ದಾಭರಣವ ತೊಡಿಸಿ | ಅರೆರೆ | ಸಾರ್ದೆಗೆದು ತರ್ಕೈಸಿ ಪ್ರೀತಿಯಿಂ ಬಡಿಸಿ ಮುರ ಮರ್ದನ ವಿಜಯವಿಠ್ಠಲ ಮೆರೆದ ಗೋಕುಲ ದೊರೆ | ಕಾರ್ದೊರಿಯ ತೀರದಲಿ | ಮನುಜಾಕೃತಿ ಲೀಲ | ನಿರ್ದೋಷ ಸುಖಪೂರ್ಣ ಸುಜನ ಜನಸಂಗಾ ||10||

Thoughts & Reflections

0

No reflections shared yet. Be the first to share your thoughts!

Share your thought