Bhasaka
← Back to home

ಬಲ್ಲವಾಗಿಲ್ಲೆ ಪರಮಾತ್ಮಾ

Author: ವಿಜಯದಾಸCategory: ಶ್ರೀಕೃಷ್ಣ
ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು ಆಡಿದವೆಲ್ಲ ಹರಿಯ ರೂಪವೆಂದು ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು ಕೂಡಿದದ್ದೆಲ್ಲ ಹರಿ ಭಕ್ತರೆಂದು ||1|| ತಾಪತ್ರಯಗಳೆಲ್ಲ ಮಹಾ ತಪಸು ಎಂದು ರೂಪಗಳೆಲ್ಲ ಹರಿಕಾಂತಿ ಎಂದು ಪೋಪದು ಬರುವುದೆಲ್ಲ ವ್ಯಾಪಾರ ಹರಿ ಅಧೀನವೆಂದು ||2|| ತಾರತಮ್ಯಕಿದು ಪರಲೋಕದಿ ಸರಿಯಿಲ್ಲ ಸಿರಿ ಹರಿಯದೊರೆ ತನಗೆ ಎಂದೆನುತಾ ಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆ ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ ||3|| ಒಲಿಸಿ ಒಲಿಸಿ ಒಲಿದು ಒಲಿದು ಖಳರೊಳಗಾಡದಲೆ ವಿಜಯವಿಠ್ಠಲ ವೆಂಕಟ ಶೈಲ ನಿವಾಸಾ ಸರ್ವೋತ್ತಮನೆ ಗತಿ ಎಂದು ||5||

Thoughts & Reflections

0

No reflections shared yet. Be the first to share your thoughts!

Share your thought