Bhasaka
← Back to home

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು

Author: ವಿಜಯದಾಸCategory: ಶ್ರೀಕೃಷ್ಣ
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ ||1|| ನೀರೊಳು ಈಸುವ ನಾರಿಯೆರ ಶೀರೇ ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ ||2|| ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ | ಪರಮಾತ್ಮನಿಗೆ ಎಣೆಯುಂಟೆ ||3|| ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ | ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ | ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ ||4|| ಅಣಕವಾಡಲಿ ಬೇಡ ಕೆಣಕಿದರೆ ನಿನ್ನ | ಹೊಣಿಕೆ ಹಾಕುವೆ ಹಿಡತಂದು | ಹೊಣಿಕೆಹಾಕುವೆ ಹಿಡತಂದು ಎನ್ನಯ | ಮನವೆ ನಿನ್ನಯ ಚರಣಕ್ಕೆ ಶೋಭಾನೆ ||5|| ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ | ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ ಗುಷ್ಟ ಕಚ್ಚದಲೆ ಬಿಡೆ ನಾನು ||6|| ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ | ಇಂದು ನಾನೇನು ಕೊಡಲಿಲ್ಲ | ಇಂದು ನಾನೇನು ಕೊಡಲಿಲ್ಲವೆಲೋ ತಂದೆ | ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ ||7|| ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ | ತೆಕ್ಕಿಸಿದಾ ವಿಜಯವಿಠ್ಠಲ ಎನ್ನ ಅಕ್ಕರವೆಲ್ಲ ತೀರಿಸಿದಾ | ಶೋಭಾನೆ ||8||

Thoughts & Reflections

0

No reflections shared yet. Be the first to share your thoughts!

Share your thought