Bhasaka
← Back to home

ಬಿಡು ಬಿಡು ಮಾಯವನು ಕೆಡದಿರು

Author: ವಿಜಯದಾಸCategory: ಶ್ರೀಕೃಷ್ಣ
ಬಿಡು ಬಿಡು ಮಾಯವನು ಕೆಡದಿರು ಕಪಟದಲಿ | ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ನಾನು ನನ್ನದು ಎಂಬೊ ಹೀನ ವಚನ ಸಲ್ಲ ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ ||1|| ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ | ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ ||2|| ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ | ಸ್ಥಿರವಾಗಿ ಇರಿಸೋದು ಅನಂತ ಜನ್ಮಾಂತರ ಪಾಪ ಪೋಗುವುದು ||3|| e್ಞÁನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು||4|| ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು | ಸತತ ಮಾಡಿದ ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು||5|| ಸಂತೋಷಗಳು ಬರಲಿ ಸಂತಾಪಗಳು ಇರಲಿ | ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ ||6|| ಧನ-ಕನಕ ವಸ್ತು ಮಾನಿನಿ ನಂದನರು ಆರು ? | ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ||7||

Thoughts & Reflections

0

No reflections shared yet. Be the first to share your thoughts!

Share your thought