Bhasaka
← Back to home

ಬೇಡುವರೊ ಸುಖ ಬೇಡರೊ ದುಃಖವ

Author: ವಿಜಯದಾಸCategory: ಶ್ರೀಕೃಷ್ಣ
ಬೇಡುವರೊ ಸುಖ ಬೇಡರೊ ದುಃಖವ ಮಾಡಾರೋ ಅವರ ಉಪಾಯವ ಜನ ಬೇಡುವರೋ ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ ಕುಟ್ಯಾರೋ ರಂಗವಲ್ಲಿಯಾ ಜನ ||1|| ಸಾಲು ಸಾಲೆಮ್ಮೆಯ ಸೋಲದೆ ತೊಳೆವರು ಸಾಲಿಗ್ರಾಮಕ್ಕ ಹಾಲೆರೆಯರೊ ಜನ ||2|| ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ ಭಜನೆಯಾ ಮಾಡದೆ ಸೋಲ್ವರೋ ಜನ||3||

Thoughts & Reflections

0

No reflections shared yet. Be the first to share your thoughts!

Share your thought