Bhasaka
← Back to home

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ

Author: ವಿಜಯದಾಸCategory: ಶ್ರೀಕೃಷ್ಣ
ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ ಮಾಡು ಕರುಣವ ಫಲದಾಯ ಯತಿರತುನತಿ ದಶಮತಿ ಮತದಲಿ ಸ ನ್ನತಿ ಹಿತ ಭಕುತಿಲಿ ಪ್ರತಿದಿನ ಸ ದ್ಗತಿ ಪಥ ಚತುರತೆ ತತುವೇಷ ತತಿಸಮ್ಮತ ಹಿತವಾಗಿಪ್ಪ ಸುಖಮತಿಯನೀಯೋ ||1|| ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ ಬಲುವೊಲಿಮೆಲಿ ವೊಲಿಸಬಾರದೇ ಕಳವಳಿಸಲು ಬಲಗುಂದಿ ನಲವು ನಿ ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ ||2|| ತ್ರಿಜಗವೀರ ಧ್ವಜ ಸುಜನರ ನಿಜಪದ ರಜರಜವಾದರು ಭಜಿಸುವ ಸರ್ವದ ವ್ರಜಗಳ ಸಂಗ ದ್ವಿಜನರವಿ ಈ ಮತದಿ ಸೃಜಿಸುವದು ಸಿರಿ ವಿಜಯವಿಠ್ಠಲರೇಯಾ ||3||

Thoughts & Reflections

0

No reflections shared yet. Be the first to share your thoughts!

Share your thought