Bhasaka
← Back to home

ಭಕುತ ಜನ ಮುಂದೆ ನೀನವರ

Author: ವಿಜಯದಾಸCategory: ಶ್ರೀಕೃಷ್ಣ
ಭಕುತ ಜನ ಮುಂದೆ ನೀನವರ ಹಿಂದೆ ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ||1|| ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?||2|| ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ | ಸತ್ಸಂಗತಿಗೆ ಹರಿದಾಸರೆಲ್ಲ || ವತ್ಸಲ ಸಿರಿ ವಿಜಯವಿಠ್ಠಲ ವೆಂಕಟಾಧೀಶ ವತ್ಸ ಮುಂದಲ್ಲದೆ ಧೇನು ತಾ ಮುಂದೆ ? ||3||

Thoughts & Reflections

0

No reflections shared yet. Be the first to share your thoughts!

Share your thought