Bhasaka
← Back to home

ಭಕುತಿ ಸುಖವೊ ರಂಗ

Author: ವಿಜಯದಾಸCategory: ಶ್ರೀಕೃಷ್ಣ
ಭಕುತಿ ಸುಖವೊ ರಂಗ ಮುಕುತಿ ಸುಖವೊ ಭಕುತಿ ಸುಖವೊ ಮುಕುತಿ ಸುಖವೊ | ಯುಕುತಿವಂತರೆಲ್ಲ ಹೇಳಿ ಭಕುತಿ ಮಾಡಿದ ಪ್ರಹ್ಲಾದ | ಮುಕುತಿಯನ್ನು ಪಡೆದುಕೊಂಡ | ಮುಕುತಿ ಬೇಡಿದ ಧ್ರುವರಾಯ | ಯುಕುತಿಯಿಂದ ಹರಿಯ ಕಂಡ ||1|| ಭಕುತಿ ಮಾಡಿದ ಅಜಮಿಳನು | ಅಂತ್ಯದಲಿ ಹರಿಯ ಕಂಡ | ಮುಕುತಿ ಬೇಡಿದ ಕರಿರಾಜ | ದುರಿತಗಳನು ಕಳೆದುಕೊಂಡ ||2|| ಭಕುತಿ ಮುಕುತಿದಾತ ನಮ್ಮ | ಲಕುಮಿಯರಸ ವಿಜಯವಿಠ್ಠಲ || ಶಕುತನೆನುತ ತಿಳಿದು ನಿತ್ಯ | ಭಕುತಿಯಿಂದ ಭಜನೆ ಮಾಡಿರೊ ||3||

Thoughts & Reflections

0

No reflections shared yet. Be the first to share your thoughts!

Share your thought