Bhasaka
← Back to home

ಭಕ್ತಜನ ಪಾಲಕ ಭಕ್ತಿಸುಖದಾಯಕ

Author: ವಿಜಯದಾಸCategory: ಶ್ರೀಕೃಷ್ಣ
ಭಕ್ತಜನ ಪಾಲಕ - ಭಕ್ತಿಸುಖದಾಯಕ ಮುಕ್ತೀಶ ದೀನಬಂಧು ಕೃಷ್ಣ ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ ಸತ್ಯವತಿ ಸುತನೆ ಕಾಯೋ ಕೃಷ್ಣ ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ | ಆನಂದದಲಿ ನಿಲಿಸೊ ಕೃಷ್ಣ || ದೀನಜನ ಮಂದಾರ ನೀನೆಂದು ನಂಬಿದೆನೊ | ಸಾನುರಾಗದಲಿ ಕಾಯೋ ಕೃಷ್ಣ ||1|| ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ | ಭ್ರಷ್ಟನಾಗಿ ಪೋದೆನೋ ಕೃಷ್ಣ || ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ | ಇಷ್ಟಗಳ ಎನಗೆ ಕೊಡಿಸೋ ಕೃಷ್ಣ ||2|| ಅಜಜನಕ ಗಜವರದ ಭುಜಗಶಯನನೆ ನಿನ್ನ | ಭಜಿಪ ಭಾಗ್ಯವನೆ ಕೊಡಿಸೊ ಕೃಷ್ಣ || ನಿಜವಾಗಿ ನಿನ್ಹೊರುತು ಸಲಹುವರ ನಾ ಕಾಣೆ |ವಿಜಯವಿಠ್ಠಲರೇಯ ಕೃಷ್ಣ ||3||

Thoughts & Reflections

0

No reflections shared yet. Be the first to share your thoughts!

Share your thought