Bhasaka
← Back to home

ಭಜಿಸಿದ್ಯಾ ವೆಂಕಟನಾ ನೀ

Author: ವಿಜಯದಾಸCategory: ಶ್ರೀಕೃಷ್ಣ
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಸುಜನರ ಹೃದಯ ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಮಣಿಮಯ ಖಚಿತ ಕಿರೀಟ ಚಂದ್ರ ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ||1|| ಭೃಂಗಕುಂತಳ ನೀಲಕೇಶ | ಹುಬ್ಬು | ಅಂಗಜ ಚಾಪ ವಿಲಾಸ | ಉ | ತ್ತುಂಗ ಚಂಪಕ ಕೋಶನಾಸ | ರಸ ರಂಗು ತುಟಿ ಮಂದಹಾಸ || ಆಹ || ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ ಮಂಗಳ ಕೃತಿ ತಿರುವೆಂಗಳ ಸ್ವಾಮಿಯ ||2|| ಪರಿಮಳವೀಳ್ಯ ಕರ್ಪೂರ | ಇಟ್ಟು | ಕರಡಿಕೆ ಬಾಯ ಮಧುರ | ವಾಣಿ ಸ್ವರನಾದ ಜಲಧಿ ಗಂಭೀರ | ದಂತ ಪರಿಪಜ್ಞೆ ಸಮ ವಿಸ್ತಾರ ||ಆಹ || ಮಿನುಗುವನಂತ ಚಂದೀರ ತೇಜಾಧಿಕ ಮುಖ ಪರಿಪರಿ ವೇದ ಉಚ್ಚರಿಸುವ ಚತುರಾರ ||3|| ಬಕುಳಾರವಿಂದ ಮಲ್ಲೀಗೆ | ಅದು | ಕುರುವಕ ಪನ್ನೀರು ಸಂಪಿಗೆ | ಭೂಚಂಪಕ ಜಾಜಿ ಯಿರುವಂತಿಗೆ | ಪೂಕೇತಕಿ ಮರುಗ ಶಾವಂತಿಗೆ ||ಆಹ|| ಸಕಲ ಪೂತರುವಿರೆ ವಿಕಸಿತ ಮುಕುಳಿತ ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು||4|| ಕರತಾಳರೇಖೋಪರೇಖ | ಕಾಂತಿ | ಅರುಣಸಾರಥಿ ಮಯೂಖ | ಬೇರೆ | ಪರಿ ಶೊಭಿತ ಹಸ್ತ ಶಂಖ | ಗದೆ | ಧರಿಸಿದ ಚಕ್ರ ನಿಶ್ಶಂಕ || ಆಹ | ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ ಉರ ವೈಜಯಂತಿ ಮಂಜರಹೀರ ಹಾರನ್ನ||5|| ಕಡಗ ಕಂಕಣ ಮುದ್ರೆ ಬೆರಳ | ಪಾಣಿ | ನಿಡಿತೋಳ ಕಕುಭುಜಿ ಕೊರಳ ಸ್ಕಂಧ ವಿಡಿ ಸಪ್ತವರಣ ವಿಸರಳ | ಬೆನ್ನು | ಮುಡಿಯವಿಟ್ಟ ಮಣಿಹವಳ ||ಆಹ | ಝಡಿತದ ಪವಳ ವಡಸೀದ ಕೇಯೂರ ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ||6|| ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ | ಕೆತ್ತಿದ ಪದಕನ್ಯಾವಳ ಸುತ್ತ ಸುತ್ತಿದ ಸನ್ಮುಡಿವಾಳ | ಇತ್ತ ತುತಿಪ ಜನಕೆ ಜೀವಾಳ ||ಆಹ || ಪ್ರತ್ಯೇಕವಾಗಿ ತೂಗುತ್ತಿಹ ಸರಗಳ ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ ||7|| ಪುಣುಗು ಕೇಸರಿ ಅಂಬರ | ಗೋರೋ ಚನ ನಖಚಂದ ನಗಾರು | ಪೆಚ್ಚಿ | ತೆನೆ ಮೃಗನಾಭಿ ಪನ್ನೀರ | ವೆಳ | ಘನಪರಿಮಳ ಗಂಧಸಾರ ||ಆಹ || ತನುವಿಗೆ ತನುವು ಲೇಪನವಾದ ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ ||8|| ತ್ರಿವಳಿ ಉಪಗೂಢ ಜಠರ | ಅಖಿ | ಳಾವನೀ ಧರಿಸಿದಾ ಧೀರಾ | ಮೇಲೆ | ಸುವರ್ಣ ಕುಸುಮ ಮಂದಿರಾ | ಮೃಗದೇವ ಉಡಿನಡು ಧಾರಾ ||ಆಹ || ಭಾವ ಕಿಂಕಿಣಿ ತೋಳಲಿವಾಸನಾ ಬಿರು ದಾವಳಿಕೊಂಡರು ದೈತ್ಯಾವಳಿ ಹಾರನ್ನಾ ||9|| ಊರು ಜಾನು ಜಂಘ ಗುಲ್ಫ | ವಿ ಚಾರ ಶಕ್ರ ಮಾತು ಅಲ್ಪ | ಎನ್ನ ತೋರುನೆಯ ಅಗ್ರ ಸ್ವಲ್ಪ | ಗುಣ | ಸಾರಮಾಡಿಪ್ಪ ಸಂಕಲ್ಪ ||ಆಹ || ವಾರಣಕರದಂತೆ ಹಾರೈಸು ಈ ತನೂ ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ||10|| ಮನು ಶಶೀವರ್ಣ ಪಾದ | ಪಾಪ ಕಾನನ ದಹಿಸುವ ಪಾದ | ಕಾಮ ಧೇನು ಚಿಂತಾಮಣಿ ಪಾದ | ಬಹು ಜ್ಞಾನಾನಂದಪ್ರದ ಪಾದ ||ಆಹಾ|| ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ ಮಾನವಗೆ ಬಂದು ಕಾಣಿಸಿಕೊಂಬನ||11|| ಮೃದುತಾಳಾಂಗುಲಿನಿಸಿ ಭಾಸ | ರಕ್ತ ಪದತಳ ಧ್ವಜ ವಜ್ರಾಂಕುಶ | ಚಕ್ರ ಪದುಮ ಚಿಹ್ನೆ | ನಿರ್ದೋಷ | ಸುಧಿ ಸುಧ ಕಥಾಪಾಠ ಸರಸ ||ಆಹ|| ತ್ರಿದಶನಾಯಕ ಶಿವ ವಿಧಿಗಮುಗುಟ ಪಾದದಲಿ ಸಮರ್ಥವಾದರು ನೋಡು ತರುವಾಯ ||12|| ಆಪದ್ರಕ್ಷಕ ಸುರಾಧ್ಯಕ್ಷ | ಜಗ | ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ | ಸ್ವಪ್ನದಲಿ ನೀನೆ ದಕ್ಷಾ | ನಗೆ | ಆಪನ್ನರಿಗೆ ನೀನೆ ವೃಕ್ಷಾ ||ಆಹ || ರೂಪರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ಮೌಳಿ ಪರಿಯಂತರ ನೀನು ||13|| ಹಿಂದಾಣ ಅನುಭವ ಧಾನ್ಯ | ಲೋಹ | ತಂದು ಸಂಪಾದಿಸೋ ಜ್ಞಾನ | ಭಕ್ತಿ | ಯಿಂದ ಮುಂದಕೆ ನಿಧಾನ | ಚಿತ್ತ | ಯಿಂದು ಕೊಂಡಾಡೋ ಮುನ್ನೀನ ||ಆಹ|| ಬಂಧನ ಹರಿಸಿ ಆನಂದಾವ ಕೊಡುವ ಮು- ಕುಂದ ಅನಿಮಿತ್ತ ಬಂಧು ವೆಂಕಟನಾ ನೀ||14|| ಭುಜಗಾದ್ರಿ ನಿಲಯ ಗೋಪಾಲ | ನಿತ್ಯ | ಭಜಿಸುವ ಜನರಿಗೆ ನೀಲ | ಪುಣ್ಯ | ವ್ರಜವ ಪಾಲಿಸುವ ವಿಶಾಲ | ವಿತ್ತು | ನಿಜದೊಳಗಿಡುವ ಈ ಕೋಲ ||ಆಹ|| ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ | ವಿಜಯವಿಠ್ಠಲರೇಯ ಗಜರಾಜವರದನ್ನ ||15||

Thoughts & Reflections

0

No reflections shared yet. Be the first to share your thoughts!

Share your thought